ಮೂಲ: AT TIMES
ಕವಿ: HUMBERTO AK’ABAL, GUATEMALA
ಉಂಬೆರ್ತೋ ಅಖ್’ಅಬಾಲ್, ಗ್ವಾಟೆಮಾಲಾ
Translated from Spanish by Earl Shorris and by Sylvia Sasson Shorris
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಕೆಲವೊಮ್ಮೆ
ಕೆಲವೊಮ್ಮೆ ನಿದ್ರೆ ನನ್ನನ್ನು ತೊರೆದು ಹೋಗುತ್ತದೆ
ಎಲ್ಲಿ ನಾನು ಹಾಸಿಗೆಯಲ್ಲಿ ಹೊರಳುತ್ತಾ
ರಾತ್ರಿಯೆಲ್ಲ ಕಳೆಯುವೆನೋ ಎಂದು
ಚಂದ್ರಮ್ಮನ ಜತೆ ಹರಟಲು ಹೊರಗೆ ಹೋಗುವೆ.
ಅವಳು ನನಗೆ ಹೇಳುವಳು ಚಿಟ್ಟೆಯಾಗಿ
ಬದಲಾಗಬಲ್ಲ ಹೂವಿನ ಬಗ್ಗೆ
ಬೆಂಕಿಯಾಗಿ ಬದಲಾಗಬಲ್ಲ
ಚಿಟ್ಟೆಯ ಬಗ್ಗೆ.
ಮತ್ತೆ ನಾನೇಳುತ್ತೇನೆ ನಿದ್ದೆಯಿಂದ
ಇವೆಲ್ಲವೂ ಕನಸಾಗಿದ್ದಂತೆ.
*****
No comments:
Post a Comment