ಮೂಲ: To My Grandfather
ಕವಿ: HUMBERTO AK’ABAL, GUATEMALA
ಉಂಬೆರ್ತೋ ಅಖ್’ಅಬಾಲ್, ಗ್ವಾಟೆಮಾಲಾ
Translated from Spanish by Earl Shorris and by Sylvia Sasson Shorris
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ನನ್ನ ಅಜ್ಜನಿಗೆ
ನನ್ನಜ್ಜನ ಹೆಜ್ಜೆಗಳು
ಇಟ್ಟಾಗಿವೆ;
ಅವನು ಎಷ್ಟೊಂದು ನಡೆದಿದ್ದಾನೆ.
ಈಗ ಭೂಮಿ ಚಲಿಸುತ್ತಿದೆ
ಮೆಲ್ಲ ಮೆಲ್ಲನೆ
ಅವನ ಪಾದಗಳಡಿಯಲ್ಲಿ
ಅವನು ಸೂರ್ಯನ ಅಂಚಿಗೆ
ಸಮೀಪಿಸುವಂತಾಗಲಿ ಅಂತ.
*****
No comments:
Post a Comment