Friday, December 24, 2021

ಮಧ್ಯಾಹ್ನ MADHYAHNA - MIROSLAV HOLUB'S 'MIDDAY'

ಮೂಲ: MIDDAY

ಕವಿಮಿರೊಸ್ಲಾವ್ ಹೊಲುಪ್ಚೆಕ್ ರಿಪಬ್ಲಿಕ್

MIROSLAV HOLUB, CZECH REPUBLIC

Translated from the Czech into English by Ewald Osers

ಕನ್ನಡ ಅನುವಾದಎಸ್. ಜಯಶ್ರೀನಿವಾಸ ರಾವ್

 

ಮಧ್ಯಾಹ್ನ

 

ಹಗಲು ತೀರಕ್ಕೆ ಬಂದು ಲಂಗರು ಹಾಕಿದೆ.

 

ಮರಗಳು ಖುಷಿಯಿಂದ ಕಂಪಿಸುತ್ತಿವೆ

ಸಾವಿರದ ಚಿಟ್ಟೆಗಳು ಹಾಡುತ್ತಿವೆ

 

ಅಂತಹ ಒಂದು ದಿನ 

ನಾವು ಪ್ರೀತಿಸುವ ಮುಖದಂತೆ

ಕಾಶ ಇನಿದಾಗಿದೆ

 

ಬೆಟ್ಟದ ಇಳಿಜಾರುಗಳಿಂದ

ಮಕ್ಕಳ ಮೆಲುದನಿಗಳು ಉರುಳುತ್ತಿವೆ

 

ಬಿಸಿಲು, ಹಾಡು, ಶಾಂತಿ:

 

ಏನೋ ಗಂಡಾಂತರ ಕಾದಿದೆ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...