ಮೂಲ: WIDE-OPEN TOMORROW
ಕವಿ: ಪಾಲ್ ಸೆಲಾನ್, ಜರ್ಮನಿ PAUL CELAN, GERMANY
Translated from the German into English by MICHAEL HAMBURGER
ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್
ಡಾಳಾಗಿ ತೆರೆದಿಟ್ಟ ನಾಳೆ
ನಾನು ಕಚ್ಚುತ್ತ ಕಚ್ಚುತ್ತ ನಿನ್ನೊಳು ದಾರಿ ಕಾಣುವೆ,
ನನ್ನ ಮೌನ ನಿನ್ನೊಳು ಬೆಚ್ಚಗೆ ಹುದುಗಿದೆ,
ನಾವು ಒಂಟಿಯಾಗಿದ್ದೇವೆ,
ಎನ್ನುವ ಹಾಗೆ ಕೇಳಿಬರುತ್ತದೆ,
ಅನಂತದ ನಾದಗಳು ಗಂಜಿಯ ಹಾಗೆ
ತೊಟ್ಟು ತೊಟ್ಟಾಗಿ ಸೋರಿಹೋಗುತ್ತಿದೆ,
ಇಂದಿನಂತಿರುವ ನಿನ್ನೆ ಅದನ್ನು ನೋಡಿ
ವಟಗುಟ್ಟುತ್ತಿದೆ,
ನಾವು ಪಯಣಿಸುತ್ತೇವೆ,
ಒಟ್ಟಾರೆ
ಆ ಕೊನೇಯ ಧ್ವನಿವರ್ಧಕ
ನಮ್ಮನ್ನು ಬರಮಾಡಿಕೊಂಡಿತ್ತು:
ಹೊರಗೆ ಅಂತರೀಕ್ಷದಲ್ಲಿ
ಹೆಚ್ಚುತ್ತಿರುವ
ಹೃದಯಬಡಿತ,
ಭೂಮಿಯ ಅಕ್ಷರೇಖೆಯಲ್ಲಿ ಬಂದು
ನೆಲೆಸುತ್ತದೆ.
*****
No comments:
Post a Comment