ಮೂಲ: WHAT IT IS
ಕವಿ: ಎರಿಕ್ ಫ಼್ರೀಡ್, ಆಸ್ಟ್ರಿಯಾ ದೇಶದ ಜರ್ಮನ್ ಭಾಷಾ ಕವಿ
ERICH FRIED, German language poet of AUSTRIA
Translated from the German by Anna Kallio
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಅದೇನೋ
ಅದು ಅಪಲಾಪ
ಎನ್ನುತ್ತದೆ ವಿವೇಕ
ಅದೇನೋ ಅದು ಅದೇ
ಎನ್ನುತ್ತದೆ ಪ್ರೇಮ
ಅದು ದುರಂತ
ಎನ್ನುತ್ತದೆ ಲೆಕ್ಕಾಚಾರ/ಎಣಿಕೆ
ಅದು ನೋವು ಬಿಟ್ರೆ ಬೇರೇನಲ್ಲ
ಎನ್ನುತ್ತದೆ ಭಯ
ಅದು ಕೆಲಸಕ್ಕೆ ಬಾರದ್ದು
ಎನ್ನುತ್ತದೆ ಪರಿಜ್ಞಾನ
ಅದೇನೋ ಅದು ಅದೇ
ಎನ್ನುತ್ತದೆ ಪ್ರೇಮ
ಅದು ಹಾಸ್ಯಾಸ್ಪದ
ಎನ್ನುತ್ತದೆ ಅಹಮ್ಮು
ಅದು ಹುಚ್ಚುತನ
ಎನ್ನುತ್ತದೆ ಎಚ್ಚರ
ಅದು ಅಸಾಧ್ಯ
ಎನ್ನುತ್ತದೆ ಅನುಭವ
ಅದೇನೋ ಅದು ಅದೇ
ಎನ್ನುತ್ತದೆ ಪ್ರೇಮ
*****
No comments:
Post a Comment