Wednesday, March 23, 2022

ಪದಗಳು - ERICH FRIED's 'WORDS'

ಮೂಲ: WORDS

ಕವಿ: ಎರಿಕ್ ಫ಼್ರೀಡ್, ಆಸ್ಟ್ರಿಯಾ ದೇಶದ ಜರ್ಮನ್ ಭಾಷಾ ಕವಿ 

ERICH FRIED, German language poet of AUSTRIA

Translated from the German by Anna Kallio

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಪದಗಳು

 

ಸುಸ್ತಾದ ನನ್ನ ಪದಗಳು ಅಕ್ಷರಗಳನ್ನು ಕಳಕೊಂಡಾಗ 

ನನ್ನ ಟೈಪ್‌ರೈಟರ್‌ನಲ್ಲಿ ಬೆಪ್ಪು ತಪ್ಪುಗಳು ಕಾಣತೊಡಗಿದಾಗ

ನನಗೆ ನಿದ್ದೆ ಮಾಡಬೇಕೆಂದು ಅನಿಸಿದಾಗ

ಈ ಪ್ರಪಂಚದಲ್ಲಿ ಜರಗುವ ಘಟನೆಗಳ, 

ನನ್ನಿಂದ ತಡೆಯಲಾಗದ ವಿಷಯಗಳ ಬಗ್ಗೆ 

ಆಗುವ ದಿನ ದಿನದ ದುಃಖದಿಂದಾಗಿ 

ಇನ್ನೆಂದೂ ನಿದ್ದೆಯಿಂದ ಏಳಲು ಮನಸ್ಸಿಲ್ಲದಾಗ

 

ಗ ಅಲ್ಲೊಂದು ಪದ ಇಲ್ಲೊಂದು ಪದ 

ಅಂದವಾಗಿ ತಯಾರಾಗಿ 

ಮೆಲ್ಲನೆ ಝೇಂಕರಿಸಲಾರಂಭಿಸುತ್ತದೆ

ಅರೆವಿಚಾರವೊಂದು ತನ್ನನ್ನು ತೀಡಿಕೊಂಡು 

ಏನನ್ನೋ ನುಂಗಲಾಗದೇ ಒಂದು ಗಳಿಗೆ 

ಉಸಿರುಕಟ್ಟಿ ಹೋಗಿರುವ ಇನ್ನೊಂದನ್ನು ಹುಡುಕುತ್ತದೆ

ಸುತ್ತ ಮುತ್ತ ನೋಡುತ್ತದೆ

ಆ ಅರೆವಿಚಾರದ ಕೈ ಹಿಡಿದು ಹೇಳುತ್ತೆ: ಬಾ

 

ಅರೆ ಯಾ ಪೂರ್ಣ ವಿಚಾರಗಳನ್ನು ಜತೆಸೇರಿಸಿ ಯಾ ಜತೆತೊರೆದು

ಸುಸ್ತಾಗಿದ್ದ ಕೆಲ ಪದಗಳು ಹಾರುತ್ತವೆ

ಕೆಲ ಟೈಪ್-ತಪ್ಪುಗಳು ತಮ್ಮತಮ್ಮಲ್ಲೇ ತಮಾಷೆಯಾಡುತ್ತವೆ

ಲಂಡನ್ನಿನ ಸ್ಲಮ್ಮುಗಳಿಂದ ಹೊರಟು 

ಕಡಲು ಬಯಲು ಬೆಟ್ಟಗಳ ಮೇಲೆ ಆಚೆ ಈಚೆ ಹಾರುತ್ತಾ 

ಮತ್ತೆ ಮತ್ತೆ ಅದೇ ತಾಣಕ್ಕೆ ಬರುತ್ತವೆ

 

ಮತ್ತೆ ಬೆಳಗ್ಗೆ ನೀನು ಮೆಟ್ಟಲುಗಳ ಇಳಿದು

ನಿನ್ನ ಉದ್ಯಾನದಲ್ಲಿ ನಡೆಯುವಾಗ

ನೀನು ನಿಂತು ಗಮನಿಸುವೆ ಅವುಗಳನ್ನು, ನೋಡುವೆ

ಅವುಗಳು ವಿಶ್ರಾಂತಿಸುವುದನ್ನು ಕಾಣುವೆ 

ಅವುಗಳ ಮಿಡಿತಗಳನ್ನು ಆಲಿಸುವೆ

ಅವುಗಳಿಗೆ ಸ್ವಲ್ಪ ಛಳಿಯಾಗುತ್ತಿದೆ 

ಈಗಲೂ ಸ್ವಲ್ಪ ಸ್ಥಳತಪ್ಪಿದಂತೆ ಇದೆ

ಆದರೆ ನಿನ್ನ ಜತೆಯಲ್ಲಿದಾರೆಂದು ನಿಜಕ್ಕೂ

ಅನಂತಾನಂದದಲ್ಲಿದ್ದಾವೆ ಅವು.   

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...