Tuesday, March 29, 2022

ನಾನು ದಿನಾ ಒಂದು ಕವನ ಬರೆಯುತ್ತೇನೆ JAAN KAPLINSKI's 'I WRITE A POEM EVERY DAY'

ಮೂಲI WRITE A POEM EVERY DAY

ಕವಿಯಾನ್ ಕ್ಯಾಪ್ಲಿನ್ಸ್ಕಿಎಸ್ಟೋನಿಯಾ JAAN KAPLINSKI, ESTONIA

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ನಾನು ದಿನಾ ಒಂದು ಕವನ ಬರೆಯುತ್ತೇನೆ

 

ನಾನು ದಿನಾ ಒಂದು ಕವನ ಬರೆಯುತ್ತೇನೆ,

ಆದಾಗ್ಯೂ, ಈ ಬರಹಗಳನ್ನು ಕವನಗಳೆಂದು 

ಕರೆಯಬಹುದೊ ನನಗೆ ಖಾತ್ರಿಯಿಲ್ಲ. 

ಇದು ಕಷ್ಟವೇನಲ್ಲ, ವಿಶೇಷವಾಗಿ ಈಗ, 

ಟಾರ್ಟು ನಗರದಲ್ಲೀಗ ವಸಂತಮಾಸ,

ಎಲ್ಲವೂ ಅದರದರ ರೂಪ ಬದಲಿಸಿಕೊಳ್ಳುತ್ತಿವೆ:

ಪಾರ್ಕುಗಳು, ತೋಟಗಳು, ರೆಂಬೆಗಳು, ಮೊಗ್ಗುಗಳು 

ಮತ್ತೆ ಶಹರದ ಮೇಲೆ ತೇಲುತ್ತಿರುವ ಮೋಡಗಳು,

ಕಾಶವೂ, ತಾರೆಗಳೂ ಸಹ.

ನನಗೆ ಮಾತ್ರ ಸಾಕಷ್ಟು ಕಣ್ಣುಗಳು, ಕಿವಿಗಳು 

ಹಾಗೂ ಸಮಯವಿದ್ದಿದ್ದರೆಂದನಿಸುತ್ತದೆ,

ಕೆಂದರೆ ಈ ಸೌಂದರ್ಯ ನಮ್ಮನ್ನು ಸುಳಿಯಂತೆ ಒಳಗೆಳೆದುಕೊಳ್ಳುತ್ತದೆ

ಲ್ಲವನ್ನೂ ಒಂದು ಕಾವ್ಯಾತ್ಮಕ ಭರವಸೆಯ ತೆರೆಯಲ್ಲಿ ಹೊದೆಯುತ್ತದೆ

ಆದರೆ ಇಲ್ಲಿ ಒಂದು ವಿಷಯ ಮಾತ್ರ ವಿಲಕ್ಷಣವಾಗಿ

ಎದ್ದು ಕಾಣುತ್ತದೆ:

ಬಸ್ ಸ್ಟಾಪಿನಲ್ಲಿ ಕೂತಿರುವ ಅರೆ-ಮರುಳು ಮನುಷ್ಯ

ತನ್ನ ಕೊಳಕಾದ ಊನವಾದ ಪಾದಗಳಿಂದ 

ಬೂಟುಗಳನ್ನು ಕಳಚುತ್ತಿದ್ದಾನೆ,

ಅವನ ಕೋಲು ಮತ್ತು ಣ್ಣೆ ಟೋಪಿ ಅವನ ಬದಿಯಲ್ಲಿ ಬಿದ್ದಿವೆ:

ಅದೇ ಟೋಪಿ ಅವನ ತಲೆಯಲ್ಲಿತ್ತು

ನೀನು ಅವನನ್ನು ಆ ದಿನ ನೋಡಿದಾಗ

ಬೆಳಗ್ಗೆ ಮೂರು ಘಂಟೆಯ ಹೊತ್ತು

ಅಂವ ಅದೇ ಬಸ್‌ಸ್ಟಾಪಿನಲ್ಲಿ ನಿಂತಿದ್ದಾಗ

ನೀನಿದ್ದ ಟ್ಯಾಕ್ಸಿ ಅವನ ದಾಟಿ ಹೋದಾಗ

ಆಗ ಡ್ರೈವರ್ ಅಂದ: ‘ಆ ಹುಚ್ಚ ಮತ್ತೆ ಕುಡಿದಿದ್ದಾನೆ.’ 

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...