Saturday, March 26, 2022

ಮೌನ ಯಾವಾಗಲೂ ಇದೆ ಇಲ್ಲಿ JAAN KAPLINSKI's 'SILENCE IS ALWAYS HERE AND EVERYWHERE'

ಮೂಲSILENCE IS ALWAYS HERE AND EVERYWHERE

ಕವಿಯಾನ್ ಕ್ಯಾಪ್ಲಿನ್ಸ್ಕಿಎಸ್ಟೋನಿಯಾ 

JAAN KAPLINSKI, ESTONIA

Translated from the Estonian by the poet with Fiona Sampson

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ಮೌನ ಯಾವಾಗಲೂ ದೆ ಇಲ್ಲಿ

 

ಮೌನ ಯಾವಾಗಲೂ ದೆ ಇಲ್ಲಿ, 

ಇದೆ ಎಲ್ಲೆಲ್ಲಿಯೂ;

ಕೆಲವೊಮ್ಮೆ ಹೆಚ್ಚು ಸ್ಪಷ್ಟವಾಗಿ ಕೇಳುತ್ತೆ ನಮಗೆ:

ಹುಲ್ಲುಗಾವಲಿನಲ್ಲಿ ಮಂಜಿದೆ, 

ಉಗ್ರಾಣದ ಬಾಗಿಲು ತೆರೆದಿದೆ,

 

ದೂರದಲ್ಲೇಲ್ಲೋ ರೆಡ್ವಿಂಗ್ ಹಕ್ಕಿಯೊಂದು ಹಾಡುತಿದೆ 

ಮತ್ತೊಂದು ಬಿಳಿ ಚಿಟ್ಟೆ ಡೆಬಿಡದೆ ರೆಕ್ಕೆ ಬಡಿಯುತ್ತಿದೆ

ಮುಳುಗುವ ಸೂರ್ಯನ ಹಿನ್ನೆಲೆಯಲ್ಲಿ ಮೆಲ್ಲನೆ ಓಲಾಡುತ್ತುರುವ 

ಲ್ಮ್ ಮರದ ರೆಂಬೆಯ ಸುತ್ತ.

ಮುಸ್ಸಂಜೆಯು ಎಲ್ಲವನ್ನು ಮುಖವಿಲ್ಲದಂತೆ 

ಮಾತಿಲ್ಲದಂತೆ ಬಿಟ್ಟು ಹೋಗಿದೆ, 

ಬೆಳಕು ಮತ್ತು ಕತ್ತಲ ನಡುವೆ 

ಅಂತರ ಮಾತ್ರ ಉಳಿದಿದೆ – 

ದೊಂದು ನಡುಬೇಸಿಗೆಯ ರಾತ್ರಿ ಅಷ್ಟೆ

ಮೇಜಿನ ಮೇಲಿದ್ದ ಹಳೆಯ ಪಾಕೆಟ್ ಗಡಿಯಾರವೊಂದು 

ಇದ್ದಕ್ಕಿದ್ದಂತೆ ಚಲಿಸಲಾರಂಭಿಸಿದೆ

ಜೋರಾಗಿ ಟಿಕ್‌-ಟಿಕ್ ಅನ್ನುತ್ತಾ.  

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...