Saturday, March 26, 2022

ಮಹಾ ಕೊಡಲಿ MAHA KODALI - JAAN KAPLINSKI's 'THE GREAT AXE'

ಮೂಲTHE GREAT AXE

ಕವಿಯಾನ್ ಕ್ಯಾಪ್ಲಿನ್ಸ್ಕಿಎಸ್ಟೋನಿಯಾ 

JAAN KAPLINSKI, ESTONIA

Translated from the Russian by Sasha Dugdale

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 

ಮಹಾ ಕೊಡಲಿ

 

ಲ್ಲರಿಗೂ ಗೊತ್ತಿತ್ತು ಅಂವ ಚಿಕ್ಕಂದಿನಿಂದಲೇ 

ಒಂದು ಕೊಡಲಿಯಾಗುವ ಕನಸು ಹೊತ್ತಿದ್ದನೆಂದು

ಶತ್ರುಗಳೊಡನೆ ಕಾದಾಡಲು, ತಲೆಗಳ, ರೆಂಬೆಗಳ ಕೊಚ್ಚಿಹಾಕಲು.

ಅವನು ದೊಡ್ಡವನಾಗಿ ಕೊಚ್ಚಿಹಾಕಿದ – 

ಸಿಬುರುಗಳು ಹಾರಿದವು, ತಲೆಗಳು ಉರುಳಿದವು, 

ಆಗ ಎಲ್ಲರಿಗೂ ಖಾತ್ರಿಯಾಯಿತು: 

ಅಂವ ಬೇರೆಲ್ಲ ಕೊಡಲಿಗಳಿಗಿಂತ ಹರಿತವಾದ, 

ಅತಿ ನಿರ್ದಯಿಯಾದ ಕೊಡಲಿ, 

ಗಟ್ಟಿಯಾದ ಉಕ್ಕಿನಿಂದ ಎರಕಹೊಯ್ದು ಮಾಡಲ್ಪಟ್ಟ,

ಎಂದೂ ತುಕ್ಕು ಹಿಡಿಯದ ಕೊಡಲಿ.  

ಆದರೆ ಯಾರಿಗೂ ಎಂದೂ ಗೊತ್ತಾಗಬಾರದು 

ಅವನು ಸಾಧಾರಣ ಕಬ್ಬಿಣದ ಕೊಡಲಿಯೆಂದು.

ಅವನಿಗೆ ತುಕ್ಕೆಂದರೆ ಭಯ.  ಕನ್ನಡಿಯ ಮುಂದೆ ತನಿಯಾಗಿ ನಿಂತು

ಅವನು ಪರಿಶೀಲಿಸುತ್ತಾನೆ, ಕೊಡಲಿಯ ಧಾರೆಯ ಮೇಲೆ ಅವೇನು

ಹೊಸ ಕೆಂಚುಬಣ್ಣದ ಕಲೆಗಳೇ?  

ಅವನ್ನು ತೊಳದು ಹಾಕಲು ಪ್ರಯತ್ನಿಸಿದ,

ತುಕ್ಕಿನ ಕಲೆಗಳನ್ನು ತಾಜಾ ರಕ್ತದ ಕಲೆಗಳಿಂದ ಮರೆಸಲು ಪ್ರಯತ್ನಿಸಿದ,

ದರೆ ತುಕ್ಕು ಹರಡಿತು, ರಕ್ತದಿಂದ ಅದನ್ನು ಮರೆಸಲಾಗಲಿಲ್ಲ.

ಆ ಒಂದು ದಿನದ ವರೆಗೆ, ಅಂದು ಅಂವ ಕೋಪದಿಂದ ಕನ್ನಡಿಯನ್ನು 

ನುಚ್ಚುನೂರು ಮಾಡಿದ, ಅದರೊಳಗೆ ಬಿದ್ದ,

ತನ್ನನ್ನು ತಾನು ಕಂಡುಕೊಂಡ ಕನ್ನಡಿಯ ಚೆ ಬದಿಯಲ್ಲಿ

ಅಡವಿಯ ಅಂಚಿನಲ್ಲಿ, ದೊಡ್ಡ ಕೆಸರುಗುಂಡಿಯ ಪಕ್ಕದಲ್ಲಿ.

ಆಗ ಅರಿತ ಅಂವ ಅವನ ಜಾಗ ಅಲ್ಲಿಯೇ, 

ಆ ಕೆಸರಗುಂಡಿಯಲ್ಲಿಯೇ ಎಂದು, 

ಅಲ್ಲಿ ತಾನು ಮತ್ತೆ ಒಂದು ಹಿಡಿ ಕೆಸರು-ಕಂದು ಬಣ್ಣದ 

ಜವುಗಿನ ಅದಿರಾಗಿ ಮಾರ್ಪಡಬಹುದು. 

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...