Thursday, March 24, 2022

ಕವಿತೆಯ ಪ್ರವೇಶವಾಗುತ್ತಿರಬೇಕಾದರೆ - RAKESH (MISHRA) SUSHIL's ಜಬ್ ಕವಿತಾ ಕಾ ಪ್ರವೇಶ್ ಹೊ JAB KAVITA KA PRAVESH HO जब कविता का प्रवेश हो

ಹಿಂದಿ ಮೂಲ: ಜಬ್ ಕವಿತಾ ಕಾ ಪ್ರವೇಶ್ ಹೊ 

JAB KAVITA KA PRAVESH HO 

जब कविता का प्रवेश हो

ಕವಿ: ರಾಕೇಶ್ (ಮಿಶ್ರಾ) ಸುಶೀಲ್

RAKESH (MISHRA) SUSHIL 

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಕವಿತೆಯ ಪ್ರವೇಶವಾಗುತ್ತಿರಬೇಕಾದರೆ

 

ಕೆಲ ದಿನಗಳ ಮಟ್ಟಿಗೆ ಹಸಿವಿನಿಂದ ಇರಬೇಕು

ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿಯಬೇಕು

ಪ್ರತಿಯೊಂದು ಭೌತಿಕ ಸ್ಪರ್ಶದಿಂದ ದೂರವಿರಬೇಕು

ಸ್ವಲ್ಪವೇ ತಿನ್ನಬೇಕು

ಹೆಚ್ಚು ಹೆಚ್ಚು ಹೊತ್ತು ಏಕಾಂತದಲ್ಲಿ ಕಳೆಯಬೇಕು


ಮನೋರಂಜನೆಗಾಗಿ ಕೇವಲ ಮಕ್ಕಳು ಆಡುವುದನ್ನು ನೋಡಬೇಕು

ಅವರ ಆಟಗಳಲ್ಲಿ ಪಾಲುಗೊಳ್ಳಬಾರದು

ಎಚ್ಚರವಿರಿಲಿ - 

ನಿಮ್ಮೊಳಗೂ ಒಂದು ಆಟ ನಡೆಯುತ್ತಿದೆ


ಓದಬೇಕೆಂದರೆ ಭಾಷೆಯ ಮೂಲಭೂತ ಚೌಕಟ್ಟಿನ ಬಗ್ಗೆ ಮಾತ್ರ ಓದಬೇಕು, ಆಲೋಚಿಸಬೇಕು

ಭಾಷೆಯ ಅಲಂಕಾರದ ಬಗ್ಗೆ ಓದುವುದು ಬೇಡ

ಜ್ಞಾನೇಂದ್ರಿಯಗಳಿಗೆ ಆದೇಶ ನೀಡಿ

ಅವು ಕವಿತೆಯ ಪ್ರತಿ ಹೆಜ್ಜೆಯನು ಅನುಭವಿಸಬೇಕು

ಒಂದು ವೇಳೆ ಹಿಂದಿರುಗಲು ಮನಸಾದರೆ

ಅಮ್ಮ ಕಲಿಸಿದ ಮೊದಲ ಪದವನ್ನು ಜ್ಞಾಪಿಸಿಕೊಳ್ಳಬಹುದು

ಮೊದಲ ಚುಂಬನ, ಪ್ರೇಮ, ಪ್ರತಿಷ್ಠೆ...

ಇವುಗಳ ನೆನಪುಗಳು ಕವಿತೆ ಬರೆಯುವುದಕ್ಕೆ ಘಾತಕ


ಈ ಎಲ್ಲಾ ಉಪದೇಶಗಳಿಗಾಗಿ ಕ್ಷಮೆಯಿರಲಿ

ಅಷ್ಟೇ, ಈಗ ಕಾಯಿರಿ.

 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...