Thursday, March 24, 2022

ಕವಿಯ ಕಸುಬು - RAKESH (MISHRA) SUSHIL's ಕವಿ ಕಾ ಕಾಮ್ कवि का काम KAVI KA KAAM

ಹಿಂದಿ ಮೂಲಕವಿ ಕಾ ಕಾಮ್ कवि का काम

KAVI KA KAAM 

ಕವಿರಾಕೇಶ್ ಮಿಶ್ರಾ ಸುಶೀಲ್

RAKESH (MISHRA) SUSHIL 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

ಕವಿಯ ಕಸುಬು

 

ಬಯಕೆಗಳು ಗಾಳಿಯಲ್ಲಿ ಈಜುವುದನ್ನು ನೋಡುತ್ತಾನೆ ಅಂವ  

ಮಕ್ಕಳ ಆಟ ನೋಡುತ್ತಾ ಕದಿಯುತ್ತಾನೆ ಸ್ವಲ್ಪ ಬಾಲ್ಯವನ್ನು 

ಶ್ಯಾಮವರ್ಣ ನಾರಿಯರ ಸ್ಮೃತಿಗಳಿಂದ ನಿರ್ಮಿಸುತ್ತಾನೆ ಒಂದು ಸಂಜೆಯನ್ನು

ಸ್ಮೃತಿಗಳನ್ನು ಕಾಪಾಡಲು ನಿರ್ಮಿಸುತ್ತಾನೆ

ಭಾಷೆಯೊಳಗೆ ಒಂದು ವಿಶಾಲವಾದ ಗೋದಾಮು

ನಾಪತ್ತೆಯಾದವರಿಗೆ ಬರೆಯುತ್ತಾನೆ ಪತ್ರಗಳನ್ನ

ತನ್ನ ಭಾಷೆಯ ಕವಿಗಳ ಸಮಾಧಿಗಳಿಗೆ ಹೋಗಿ ದುತ್ತಾನೆ ಫಾತೆಹಾ

ಅತೃಪ್ತ ಆತ್ಮಗಳಿಗಾಗಿ ಬೇಡುತ್ತಾನೆ ದುವಾ


ಯಾವುದೋ ನುರಿತ ಲೇಖಕನ ತರಹ

ಸಮಯದ ಬೆನ್ನ ಮೇಲೆ ಬರೆಯುತ್ತಾನೆ ಪ್ರಬಂಧಗಳನ್ನ

ದುತ್ತಾರೆ ಅವನ್ನು ಜನರು ಹೊಳೆಯುವ ಕಣ್ಗಳಿಂದ

ಅವನ ನಿಧನದ ನಂತರ

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...