Thursday, March 24, 2022

ಕೆಲವು ಹೊಸ ಪರಿಭಾಷೆಗಳು - RAKESH (MISHRA) SUSHIL's कुछ नई परिभाषाएँ KUCH NAYI PARIBHAASHAYEIN

ಹಿಂದಿ ಮೂಲकुछ नई परिभाषाएँ ಕುಛ್ ನಯೀ ಪರಿಭಾಷಾಯೇಂ

KUCH NAYI PARIBHAASHAYEIN 

ಕವಿರಾಕೇಶ್ ಮಿಶ್ರಾ ಸುಶೀಲ್

RAKESH (MISHRA) SUSHIL 

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 

 

ಕೆಲವು ಹೊಸ ಪರಿಭಾಷೆಗಳು

 

ಮಕ್ಕಳು ಮಾತಾಡುವ ಕುಸುಮಗಳು

ಸಂಜೆ ಶ್ಯಾಮವರ್ಣ ನಾರಿಯೊಬ್ಬಳ ನಗು  

ಪೆನ್ನು ಪದಗಳ ಹುಡುಕುವ ಆಯುಧ

ಮಳೆ ಆಕಾಶದ ಅಳು

ಪುಸ್ತಕ ಅಚ್ಛಾದ ಸಂಗೀತ

ಪ್ರೇಮ ಒಂದು ಪ್ರತೀಕ್ಷೆ

ಭಾಷೆ ಒಂದು ಮನೆ

ಕಾಂತ ಆಮ್ಲಜನಕದಂತೆ

ಸಾವೆಂಬುದು ವಿದಾಯ

ಕ್ರಾಂತಿ ಒಂದು ಕನಸು

ರಾತ್ರಿ ನಿದ್ರೆಯ ಮನೆ

ಬರೆಯುವುದೆಂದರೆ ಒಂಟಿತನವ ಸ್ಪರ್ಶಿಸಿದಂತೆ

ಹಾಗೂ ಕವಿತೆ ಅಪೂರ್ಣತೆಯ ಉತ್ಸವ

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...