ಮೂಲ: anatomy of hearing
ಕವಿ: ಯುಜಿನಿಯಸ್ ಅಲಿಸಂಕ, ಲಿಥುವೇನಿಯಾ
EUGENIJUS ALISANKA, LITHUANIA
Translated from the Lithuanian into English by Inara Cedrins
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್
ಶ್ರವಣದ ಒಡಲರಿಮೆ
ನನಗೆ ಸದಾ ಕೇಳಿಬರುತ್ತೆ ಹರಿಯುವ ರಕ್ತದ ಲಯ
ನನ್ನ ಕಣತಲೆಯ ಕಚ್ಚಿನ ಕೆಳಗೆಲ್ಲೋ, ಹಾಗೂ
ಬದುಕಿರುವವರ ಧ್ವನಿಗಳೊಂದಿಗೆ ಅಸಮರಸವಾಗಿ
ನನ್ನ ಕಪಾಲದ ಮಧ್ಯದಿಂದ ಜುಮ್ಮೆನಿಸುವ ಅನುಭವ,
ಗಂಟಲಾಳದಲ್ಲಿ ಗಂಟೊಂದು ಬಿಗಿಯುತ್ತಿದೆ,
ಜಡೆಗಟ್ಟಿದ ಆದಿಕಾಲದ ಭಯ
ಹಾಗೂ ಮತ್ತೊಂದು ಬದುಕಿನ ಮುನ್ಸೂಚನೆ.
ನಾನು ಹರಯಕ್ಕೆ ಬಂದಾಗಿನಿಂದ
ನನ್ನ ಮಗ್ಗುಲ ಅಳ್ಳೆಯ
ಮೇಲ್ಭಾಗದಲ್ಲೊಂದು ಕಂಪನ,
ಜೀವ ಹಾಗೂ ಅವಮಾನಗಳನ್ನು
ಒಂದೇ ಉಸಿರಿನಲ್ಲಿ ತರುವ ಮೃಗ ನಾನೇನೋ ಎಂಬಂತೆ.
ಆಲ್ಟಾಯ್ ಬೆಟ್ಟಗಳಲ್ಲಿ ನಿಂತಿರುವಾಗ
ದೇವರ ಬಲಗೈಯ ಹತ್ತರ ಇದ್ದೇನೇನೋ ಅಂತನಿಸುತ್ತೆ,
ಮೊಣಕಾಲ ಹಿಂಭಾಗದಲ್ಲಿ ಸೆಡೆತ,
ಅಂಗಾಲಿನಲ್ಲಿ ಹಗುರವಾದ ಜೋಮ್ಮು,
ಆಗ ನನಗೆ ಕವನವೊಂದರ ಅಲಿಖಿತ
ಸಾಲೊಂದು ಅಕಸ್ಮಾತ್ ಎದುರಾಗುತ್ತೆ.
*****
No comments:
Post a Comment