Thursday, July 7, 2022

ನನ್ನ ಪೈಕಿಯವರ ಜತೆಯಲ್ಲಿ - EUGENIJUS ALISANKA's 'WITH MY OWN KIND'

ಮೂಲ: WITH MY OWN KIND 

ಕವಿ: ಯುಜಿನಿಯಸ್ ಅಲಿಸಂಕ, ಲಿಥುವೇನಿಯಾ

EUGENIJUS ALISANKA, LITHUANIA 

Translated from the Lithuanian into English by 

EUGENIJUS ALISANKA and KERRY SHAWN KEYS

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ನನ್ನ ಪೈಕಿಯವರ ಜತೆಯಲ್ಲಿ

 

ಸಾಮಾನ್ಯವಾಗಿ ಆದಿತ್ಯವಾರದಂದು

ನಾನು ಕೊನೆಯ ಸಾಲನ್ನು ಆಯ್ದುಕೊಳ್ಳುವೆ,

ನಿಂತುಕೊಳ್ಳಬೇಕೆಂದರೆ ಇನ್ನೂ ಒಳ್ಳೆಯದು,

ನಿಲ್ಲುವೆ ಒಂದು ಕಂಬದ ಹಿಂದೆ,

ಅಲ್ಲಿ ಪ್ರತಿಧ್ವನಿ ಮಾತ್ರ ಕೇಳಿಬರುತ್ತೆ,

ಕೇಳಿಬರಲ್ಲ ಎಂದೂ ಸ್ಪಷ್ಟ ಮಾತು,

ಅದೂ ಗಂಭೀರವಾದ 

ಪ್ರವಚನವೆಂದಾದರೆ 

ಅಥವಾ ಔತಣಕ್ಕೆ 

ಕರೆಯೋಲೆಯೆಂದಾದರೆ,

ಹೊರಗೆ ನಿಲ್ಲುವುದು ಅತಿ ಉತ್ತಮ.

ಲ್ಲಿ ನಾನು ಆಲಿಸಿವೆ ಜೇನ್ನೊಣಗಳ ಝೇಂಕಾರವ,

ಅವು ಜೇನನ್ನು ನೇರ ದೇವರ 

ಕಿವಿಯೊಳಗೆ ಯ್ಯುವವು.

ಟೋಪಿ ಧರಿಸಿ ನಿಲ್ಲುವೆ ಕೆಲ ಹೊತ್ತು,

ನಂತರ ಬಾಯೊಳಗೆ ಎರಡು ಬೆರಳು ತೂರಿಸಿ

ಶಿಳ್ಳೆ ಹೊಡೆಯುವೆ ನನ್ನಿಂದಾದಷ್ಟು ಜೋರಾಗಿ.

ಓಡೋಡಿ ಬರುವವು ಅವು, ಚಿಕ್ಕವು, ದೊಡ್ಡವು,

ಶುದ್ಧ ತಳಿಯವು, ತಳಿಯಲ್ಲದವು,

ಕೊಳೆಯಾದವು, ತೊನ್ನಿನವು,

ಹಿತ್ತಲಬೀದಿಗಳಲ್ಲಿ ನಾಯಲೆಯುವೆವು ನಾವು

ಬೇಲಿಗಳ ಬಳಸುತ್ತಾ,

ರೋಮಾಂಚನವನ್ನರಸುತ್ತಾ,

ಸಾಮಾನ್ಯವಾಗಿ ಆದಿತ್ಯವಾರದಂದು

ನಾನು ನನ್ನ ಪೈಕಿಯವರ ಜತೆಗೇ ಇರುವೆ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...