Thursday, July 7, 2022

ಲಿಥುವೇನಿಯನ್ ಸಾಹಿತ್ಯದ ಬಗ್ಗೆ ಒಂದು ಪ್ರಬಂಧ - EUGENIJUS ALISANKA's 'Essay on Lithuanian Literature'

ಮೂಲ: Essay on Lithuanian Literature 

ಕವಿ: ಯುಜಿನಿಯಸ್ ಅಲಿಸಂಕ, ಲಿಥುವೇನಿಯಾ

EUGENIJUS ALISANKA, LITHUANIA 

Translated from the Lithuanian into English by Kerry Shawn Keys

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 

ಲಿಥುವೇನಿಯನ್ ಸಾಹಿತ್ಯದ ಬಗ್ಗೆ ಒಂದು ಪ್ರಬಂಧ

 

ನಾನೇಕೆ ಬರೆಯುತ್ತೇನೆಂಬ ಪ್ರಶ್ನೆಗೆ ಉತ್ತರ 

ಕೊಡುವ ಸಾಧ್ಯತೆ ಕಡಿಮೆಯಾಗುತ್ತಾ ಬರುತಿದೆ

ಕೆಲಸಲ ಅನಿಸುತ್ತೆ: ಬರೆಯಬೇಕಾದರೆ

ಕೆಲಸಲ ನಾನು ಬೆಳಕ ಕಾಣುತ್ತೇನೆ

ಕಾವ್ಯದಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಬರುತಿದೆ  

(ಗದ್ಯದ ಬಗ್ಗೆ ಬೇರೆಯಾಗಿ ಹೇಳಬೇಕಾಗಿಲ್ಲ)

ಕೆಲಸಲ ಅನಿಸುತ್ತೆ: ನಾನು ಮರೆಯಲಿಕ್ಕಾಗಿ ಓದುತ್ತೇನೆಂದು

ಕೆಲಸಲ ಅನಿಸುತ್ತೆ: ಈ ಅನುದ್ದಿಷ್ಟ ಪದಗಳ ಆಟದ ಹಿಂದೆ ಇರುವುದು ನಾನೇ

ಲಿಥುವೇನಿಯನ್ ಕವಿಗಳ ಸಂಗದಲ್ಲಿ ಇರಬೇಕೆಂದು 

ನನ್ನನ್ನು ನಾನು ಹೆಚ್ಚು ಹೆಚ್ಚು ಒತ್ತಾಯ ಪಡಿಸಿಕೊಳ್ಳುತ್ತೇನೆ

ಕೆಲಸಲ ಈ ಕವಿಗಳು ರಷ್ಯನ್ ಕಾವ್ಯದಲ್ಲಿದ್ದಂತೆ 

ಪುಷ್ಕಳವಾಗಿ, ಕುಟಿಲಮನಸ್ಸಿನವರಾಗಿರುತ್ತಾರೆ 

ಕೆಲಸಲ ರಾಪ್ ಸಂಗೀತದಲ್ಲಿದ್ದಂತೆ 

ಮತ್ತೇರಿದವರಾಗಿ, ಜಗಳಗಂಟರಾಗಿರುತ್ತಾರೆ

ಕೆಲಸಲ ನನ್ನ ಹಾಗೆ ಇದ್ದೂ ಇಲ್ಲದಂತಿರುತ್ತಾರೆ

ಲಿಥುವೇನಿಯನ್ ಕಾವ್ಯದ ಬಗ್ಗೆ ನಾನು ಅತಿಶಯಿಸದೆ ಯೋಚಿಸಿದಾಗ

ಕೆಲಸಲ ನನಗೆ ನೆನಪಾಗುಗುವುದು ಕೆಲವೇ ಹೆಸರುಗಳು ಮಾತ್ರ: 

ವ್ಯಾಟೌಟಸ್, ಅಲಫೋನ್ಸಸ್, ಸಿಗಿಟಸ್

ಕೆಲಸಲ ನಾನನ್ನುತ್ತೇನೆ: ಕಾವ್ಯ ಕಲೆಯನ್ನು ಕಲಿಸಬಹುದು 

ಜೀವನವನ್ನಲ್ಲ

ಕೆಲಸಲ ನಾ ಕೇಳುತ್ತೇನೆ: ಕಾವ್ಯಕ್ಕೆ ಜೀವನದ ಬಗ್ಗೆ 

ಕಾಳಜಿಯಿದೆಯೇ ಸೆಲಾನ್‌ಗೆ ಇದ್ದಂತೆ 

ಕೆಲಸಲ ನಾನು ಮೌನವಾಗಿರುತ್ತೇನೆ: 

ಈ ಮೌಢ್ಯ ಮುಂದೆಂದೋ ನನ್ನನ್ನು ಪೇಚಿಗೆ ಸಿಲಿಕಿಸುತ್ತೆ

 

***** 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...