Thursday, July 7, 2022

ಸ್ಕ್ರಿಪ್ಟ್ - EUGENIJUS ALISANKA's 'SCRIPT'

ಮೂಲ: SCRIPT 

ಕವಿ: ಯುಜಿನಿಯಸ್ ಅಲಿಸಂಕ, ಲಿಥುವೇನಿಯಾ

EUGENIJUS ALISANKA, LITHUANIA 

Translated from the Lithuanian into English by 

EUGENIJUS ALISANKA and KERRY SHAWN KEYS

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


ಸ್ಕ್ರಿಪ್ಟ್

 

ಕಾಲ: ಶತಮಾನದ ಆದಿಯಲ್ಲಿ

ಸ್ಥಳ: ಸಾಧ್ಯತೆಗಳಿರುವ ಶಹರಿನಲ್ಲಿ

ದೃಶ್ಯ ಒಂದು: ಒಂದು ಕೆಫೆ, ಮುಂಜಾನೆಯಲ್ಲಿ

ಪಾತ್ರಗಳು: ತೂರಾಡುತ್ತಿರುವ ಕೆಫೆ ಮಾಲಿಕ ಮತ್ತು 

ಮೊದಲ ಗ್ರಾಹಕ

ಮೊದಲನೆಯ ಅಂಕ: ಯುವಕನೊಬ್ಬ ‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’ 

ಪುಸ್ತಕವನ್ನು ಮೂಲ ಭಾಷೆಯಲ್ಲಿ ಓದುತ್ತಾ 

ಕಾಫಿ ಹೀರುತ್ತಿದ್ದಾನೆ. ಪುಸ್ತಕವನ್ನು 

ಮೇಜಿನಲ್ಲೇ ಬಿಟ್ಟು ಎದ್ದು ಹೋಗುತ್ತಾನೆ.

ದೃಶ್ಯ ಎರಡು: ಅದೆ ಕೆಫೆ, ಮಧ್ಯಾಹ್ನದ ಹೊತ್ತು

ಪಾತ್ರಗಳು: ಉಲ್ಲಾಸಭರಿತ ಕೆಫೆ ಮಾಲಿಕ ಮತ್ತು 

ಊಟಮಾಡುತ್ತಿರುವ ಕಾರ್ಮಿಕರು.

ಎರಡನೆಯ ಅಂಕ: ಊಟಕ್ಕೆ ಬಂದವರು ದಿನಪತ್ರಿಕೆಗಳ ಪುಟ 

ತಿರುಗಿಸುತ್ತಿದ್ದಾರೆ; ಯೂರೋ ಕರೆನ್ಸಿಯ ವಿನಿಮಯ ದರದ 

ಬಗ್ಗೆ ತ್ಸಾಹದಿಂದ ಚರ್ಚಿಸುತ್ತಿದ್ದಾರೆ.

ದೃಶ್ಯ ಮೂರು: ಅದೇ ಕೆಫೆ, ರಾತ್ರಿಯಲ್ಲಿ

ಪಾತ್ರಗಳು: ಸುಸ್ತಾಗಿರುವ ಕೆಫೆ ಮಾಲಿಕ ಮತ್ತು 

ಕೆಲಸದ ನಂತರ ಅಲ್ಲಿ ಸೇರಿರುವ ಸ್ಥಳೀಯರು.

ಮೂರನೆಯ ಅಂಕ: ಬಿಯರ್ ಕುಡಿಯುತ್ತಿರುವ ಸ್ಥಳೀಯರು.  

ಟೀವಿ-ಯಲ್ಲಿ ಯುರೊಪಿಯನ್ ಫುಟ್ಬಾಲ್ ಚ್ಯಾಂಪಿಯನ್‌ಶಿಪ್

ಪ್ರಸಾರವಾಗುತ್ತಿದೆ, ಬಲು ಜೋರಾಗಿ ಕೇಳಿಬರುತ್ತಿದೆ.

ದೃಶ್ಯ ನಾಲ್ಕು: ಅದೇ ಕೆಫೆ, ಮುಚ್ಚುವ ಮುನ್ನ

ಪಾತ್ರಗಳು: ಕೆಫೆಯ ಮಾಲಿಕ

ನಾಲ್ಕನೆಯ ಅಂಕ: ಕೆಫೆ ಮಾಲಿಕ ‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’ 

ಪುಸ್ತಕವನ್ನು ಓದುತ್ತಿದ್ದಾನೆ.

ಪರದೆ 

***** 

‘ದಿ ಡಿಕ್ಲೈನ್ ಆಫ್ ದಿ ವೆಸ್ಟ್’ [The Decline of the West] ಎಂಬುದು ಸ್ವಾಲ್ಡ್ ಸ್ಪೆಂಗ್ಲರ್ [Oswald Spengler] ಎಂಬ ಜರ್ಮನ್ ತಹಾಸಜ್ಞ ಹಾಗೂ ಇತಿಹಾಸದ ಚಿಂತಕ, ಜರ್ಮನ್ ಭಾಷೆಯಲ್ಲಿ, ರಡು ಸಂಪುಟಗಳಲ್ಲಿ [1918ರಲ್ಲಿ ಮೊದಲ ಸಂಪುಟ ಹಾಗೂ 1922ರಲ್ಲಿ ಎರಡನೆಯ ಸಂಪುಟ], ಬರೆದ ಪುಸ್ತಕ.    ಸ್ಪೆಂಗ್ಲರ್ ತನ್ನ ಪುಸ್ತಕವನ್ನು "ಕೋಪರ್ನಿಕನ್ ಲೋಕ-ದೃಷ್ಟಿಯನ್ನು ಬುಡಮೇಲು” ಮಾಡುವ ಪುಸ್ತಕ  ಎಂದು ಪರಿಚಯಿಸಿದನು.  ಸಮಾಜದ ಕುಸಿತದ ಒಂದು ನಿರ್ದಿಷ್ಟ ರೂಪಕವಿದು ಹಾಗೂ ಇತಿಹಾಸದ ಯುರೋಸೆಂಟ್ರಿಕ್‌ ದೃಷ್ಟಿಯನ್ನು, ವಿಶೇಷವಾಗಿ ಇತಿಹಾಸವನ್ನು "ಪ್ರಾಚೀನ-ಮಧ್ಯಕಾಲೀನ-ಆಧುನಿಕ" ಆಗಿ ವಿಭಜಿಸುವ ಕ್ರಮವನ್ನು ತಿರಸ್ಕರಿಸುತ್ತದೆ.


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...