Friday, July 8, 2022

ನನ್ನ ಜೀವದ ಗಡಿಯಾರ - INDRĖ VALANTINAITĖ's 'BIOLOGICAL CLOCK'

ಮೂಲ: BIOLOGICAL CLOCK

ಕವಿಇಂಡ್ರೆ ವ್ಯಾಲಂಟಿನಾಯ್ಟೆಲಿಥುವೇನಿಯಾ

INDRĖ VALANTINAITĖ, LITHUANIA 

Translated from the Lithuanian into English by ADA VALAITIS

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್ 



ನನ್ನ ಜೀವದ ಗಡಿಯಾರ


ತಲೆಮಾರಿನಿಂದ ತಲೆಮಾರಿಗೆ ಕೈದಾಟಿ ಬಂದಿರುವುದು.

ಒಂದು ಅಮೂಲ್ಯ ಪುರಾತನ ವಸ್ತು.

ಆದರೆ, ನಾನದನ್ನು ಅಡವಿನಂಗಡಿಯಲ್ಲಿ ಒತ್ತೆಯಿಡಕ್ಕಾಗಲ್ಲ - ನನ್ನೊಳಗೆ ಆಳವಾಗಿ ಹುದುಗಿದೆ ಅದು.

 

ನನ್ನ ಜೀವದ ಗಡಿಯಾರ 

ಆತಂಕವಾದಿಯೊಬ್ಬನ ಕೈಯಲ್ಲಿರುವ 

ಬಾಂಬಿನ ಹಾಗೆ ಟಿಕ್ ಟಿಕ್ ಟಿಕ್ 

ಎಂದು ಕ್ಷಣಗಳ ಎಣಿಸುತ್ತಿದೆ.

 

ಒಂದಾನೊಂದು ದಿನ ನಾನು ಜನ್ಮನೀಡುವೆ.

ಒಂದಾನೊಂದು ದಿನ ನಾನು ಪುಟ್ಟ ಮೀನೊಂದನ್ನು

ಶಾರ್ಕ್-ಮೀನಿನ ತೊಟ್ಟಿಯಲ್ಲಿ ಎಸೆಯುವೆ.

 

ನಾನು ನನ್ನ ಮಗನ ಮೊದಲ ಕಂಪಾರ್ಟ್‌ಮೆಂಟಾಗುವೆ, 

ಕಪ್ಪಿಟ್ಟ ಕಿಟಿಕಿಗಳೊಂದಿಗೆ,

ನಾನು ಅವನನ್ನು ಬೆಳಕುಳ್ಳ ಸ್ಟೇಶನಿನಲ್ಲಿ ಇಳಿಸುವೆ, 

ಆದರೆ ಪೇಪರ್‌ಗಳಲ್ಲಿ ವರದಿಗಳು ಬರುತ್ತಾನೆ ಇರುತ್ತವೆ 

ನೆರೆಗಳ, ಆತ್ಮಹತ್ಯೆಗಳ.

ಬಿರುಗಾಳಿಗಳ, ಅಪಘಾತಗಳ ಬಗ್ಗೆ, ಮತ್ತಿತರ ದಂಡನೆಗಳ ಬಗ್ಗೆ.

 

ಮತ್ತೆ, ನನ್ನ ಜೀವದ ಗಡಿಯಾರ 

ಆತಂಕವಾದಿಯೊಬ್ಬನ ಕೈಯಲ್ಲಿರುವ 

ಬಾಂಬಿನ ಹಾಗೆ ಟಿಕ್ ಟಿಕ್ ಟಿಕ್ 

ಎಂದು ಕ್ಷಣಗಳ ಎಣಿಸುತ್ತಿದೆ

 

*****

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...