Sunday, July 24, 2022

ನಾಯಿಯ ಕೂಗು ಏರುವುದು ಆಕಾಶಕ್ಕೆ - RAMUNĖ BRUNDZAITĖ's 'A DOG’S VOICE TO THE HEAVENS GOES'

ಮೂಲ: A DOG’S VOICE TO THE HEAVENS GOES

ಕವಿರಾಮುನ್ ಬ್ರುಂಡ್ಜಾಯಿಟ್ಲಿಥಿವೇನಿಯಾ

RAMUNĖ BRUNDZAITĖ, Lithuania 

Translated from the Lithuanian 

into English by RIMAS UZGIRIS

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 


ನಾಯಿಯ ಕೂಗು ಏರುವುದು ಆಕಾಶಕ್ಕೆ

 

ನನ್ನ ನಾಯಿ 

ರಾತ್ರಿಯಲ್ಲಿ ಪ್ರಾರ್ಥಿಸುತ್ತೆ 

ನಾಯಿ ದೇವರಿಗೆ, 

ಹಗಲಿನಲ್ಲಿ ಬಾಲವನ್ನಾಡಿಸುತ್ತೆ,

ಆದರೆ ಅವನ ದುಃಖಿತ ಕಣ್ಣುಗಳು

ಅವನನ್ನು ಬಿಟ್ಟುಕೊಡುತ್ತದೆ – 

ಅವನಿಗೆಲ್ಲಾ ಗೊತ್ತಿದೆ,

ಮತ್ತೆ ಆ ‘ಒಲ್ಡ್ ಯೆಲರ್’*-ನ ಸಾವಿನ ಬಗ್ಗೆ ಮಾತ್ರವಲ್ಲ,

ಮತ್ತೂ ಗೊತ್ತಿದೆ.

ನಾನು ಕನಸ ಕಾಣುವೆ, ನಾವು ಜತೆಜತೆಯಾಗಿ

ಹೇಗೆಲ್ಲಾ ನಾಯಿ ಚೇಷ್ಟೆಗಳನ್ನ ಆಡುವೆವೆಂದು,

ಆದರೆ ಅವನು ಬಹುಶಃ ನನ್ನ ಜತೆ ಕುಳಿತು 

ಒಂದೆರಡು ಗ್ಲಾಸು ಬಿಯರ್ ಕುಡಿಯಲು ಇಷ್ಟಪಡಬಹುದೇನೊ

ಮತ್ತೆ ನಮ್ಮ ತಲೆ ಸುತ್ತಲಾರಂಭಿಸಿದಾಗ, ಹೇಳುವ ಅವನು: -

ಈ ನಾಯಿ ಬದುಕು ನನಗೆ ರೋಸಿಹೋಗಿದೆ,

ಈ ನನ್ನ ಕಪ್ಪು ತುಪ್ಪುಳು, ಆ ನಾಯಿ ದೇವತೆ,

ಅದೂ ಬಹುಶಃ ಮಾನವನ ಕಲ್ಪನೆಯೆ ಇರಬೇಕು –

ಮಾನವರು ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾರೆ, 

ಅವರನ್ನು ನಾವು ಹಠಹಿಡಿದು ನಿರ್ಲಕ್ಷಿಸುತ್ತೇವೆಂಬ 

ಕಲ್ಪನೆಯೂ ಸಹ.

 

*****


*‘ಒಲ್ಡ್ ಯೆಲರ್’(Old Yeller) ಎಂಬುದು ಅದೇ ಹೆಸರಿನ 1956ರಲ್ಲಿ ಫ಼‌್ರೆಡ್ ಗಿಪ್ಸನ್ (Fred Gipson) ಎಂಬ ಅಮೇರಿಕನ್ ಲೇಖಕಬರೆದ ಕಾದಂಬರಿಯಲ್ಲಿ ಬರುವ ದೊಡ್ಡ ಗಾತ್ರದ ಕಪ್ಪು ಮೂತಿಯ ಹಳದಿ ಬಣ್ಣದ, ‘ಬ್ಲ್ಯಾಕ್ ಮೌತ್ ಕರ್’ (Black Mouth Cur) ಎಂಬ ಜಾತಿಯ ಬೇಟೆ ನಾಯಿ. 1957ರಲ್ಲಿ ಈ ಕಾದಂಬರಿಯನ್ನು ಆಧರಿಸಿ ಇದೇ ಹೆಸರಿನಲ್ಲಿ ಮಾಡಿದ ಚಲನಚಿತ್ರ ಬಹಳ ಯಶಸ್ಸು ಕಂಡಿತು.  ಒಂದು ಮಕ್ಕಳ ಚಿತ್ರವಾಗಿ, ಒಬ್ಬ ಬೆಳೆಯುವ ಹುಡುಗ ಮತ್ತು ಅವನ ನಾಯಿಯ ನಡುವೆ ಇರುವ ಸಂಬಂಧ, ಪ್ರೀತಿಗಳ ಕತೆಯಾಗಿ ಅಮೇರಿಕದ ಜನತೆ ‘ಒಲ್ಡ್ ಯೆಲರ್’ ಚಿತ್ರವನ್ನು ಮೆಚ್ಚಿಕೊಂಡರು.  ಅಮೇರಿಕದ ಕ್ಯಾನ್ಸಸ್ (Kansas) ಪ್ರಾಂತದ ಗ್ರಾಮ್ಯ ಹಿನ್ನೆಲೆಯಲ್ಲಿ ನಡೆಯುವ ಈ ಕಥೆ ಅಮೇರಿಕದಲ್ಲಿ ಎರಡನೆಯ ವಿಶ್ವಯುದ್ಧದ ನಂತರ ಹುಟ್ಟಿದ ತಲೆಮಾರಿನವರಿಗೆ (Baby Boomers) ಈ ಚಿತ್ರವೊಂದು ಸಾಂಸ್ಕೃತಿಕ ಮೈಲಿಗಲ್ಲು ಎನ್ನಬಹುದು.  ಈ ಚಿತ್ರದಲ್ಲಿ ಕ್ಯಾನ್ಸಸ್-ನ ರೈತನೊಬ್ಬನ ಕಿರಿಮಗ ‘ಒಲ್ಡ್ ಯೆಲರ್’ನ್ನು ತನ್ನ ಸಾಕುನಾಯಿಯನ್ನಾಗಿ ಇಟ್ಟುಕೊಳ್ಳುತ್ತಾನೆ.  

 

ಹಳದಿ ಬಣ್ಣದ ನಾಯಿಯಾದ್ದರಿಂದ, ಇದಕ್ಕೆ ‘yellow’ ಎಂದು ಹೆಸರಿಡುತ್ತಾನೆ ಆ ಹುಡುಗ, ಆದರೆ ‘ಯೆಲೊ’ ಪದ ಆ ಪ್ರಾಂತದವರ ಉಚ್ಛಾರಣೆಯಲ್ಲಿ ‘ಯೆಲರ್’ (yeller) ಎಂದು ಕೇಳಿಬರುತ್ತೆ; ಈ ನಾಯಿ ಬಹಳವೇ ಜೋರಾಗಿ ಬೊಗಳುತ್ತೆ, ಆದ್ದರಿಂದಲೂ ಕೂಡ ‘ಯೆಲರ್’ ಎಂಬ ಹೆಸರು ಸೂಕ್ತವಾಗಿದೆ.  ಇಂಗ್ಲಿಷ್-ನಲ್ಲಿ ‘ಯೆಲ್’ (yell) ಅಂದರೆ ಬೊಬ್ಬೆ ಹೊಡೆಯುವುದೆಂದು ಅರ್ಥ.

 

ನಾಯಿಯನ್ನು ಇಟ್ಟುಕೊಳ್ಳುವುದಕ್ಕೆ ಅವನ ಮನೆಯವರೆಲ್ಲರ ವಿರೋಧವಿದ್ದರೂ, ಅವನು ನಾಯಿಯನ್ನು ಬಿಟ್ಟುಕೊಡುವುದಿಲ್ಲ.  ಅದು ದೊಡ್ಡದಾಗಿ ಬೆಳೆದು ಕಾವಲುನಾಯಿಯಾಗಿ ಆ ರೈತನ ಮನೆಯವರಿಗೆ, ಅವನ ಕೆಲಸದಲ್ಲಿ ಸಹಾಯ ಮಾಡುತ್ತೆ.  ಮನೆಯ ದನಗಳ ಮೇಲೆ ಒಂದು ದಿನ ತೋಳವೊಂದು ಹಲ್ಲೆ ಮಾಡಿದಾಗ, ಒಲ್ಡ್ ಯೆಲರ್ ಅದರೊಂದಿಗೆ ಸೆಣಸಾಡಿ ಓಡಿದುತ್ತೆ.  ಆದರೆ, ಆ ಸೆಣಸಾಟದಲ್ಲಿ ತೋಳವು ಒಲ್ಡ್ ಯೆಲರ್-ನು ಕಚ್ಚಿಬಿಡುತ್ತೆ.  ಅದರಿಂದ ಒಲ್ಡ್ ಯೆಲರ್-ಗೆ ರೇಬೀಸ ರೋಗ ಬಂದು ಒದ್ದಾಡುತ್ತೆ.  ಅದರ ಕಷ್ಟ ನೋಡಲಾರದೆ, ಒಲ್ಡ್ ಯೆಲರನ್ನು ಸಾಯಿಸಬೇಕಾಗಿ ಬರುತ್ತೆ.  ಗುಂಡಿಟ್ಟು ಕೊಲ್ಲಲ್ಲಾಗುತ್ತೆ.  ಈ ಕವನದಲ್ಲಿ ಬರುವ ‘ಒಲ್ಡ್ ಯೆಲರ್’ನ ಸಾವಿನ ಲ್ಲೇಖ ಕವಿಯು ಈ ಕಾದಂಬರಿ/ ಚಲನಚಿತ್ರದಿಂದ ತೆಗೆದುಕೊಂಡಿದ್ದಾರೆ.  ಅಂದರೆ, ಲಿಥುವೇನಿಯಾದ ಸಮಕಾಲೀನ ಕವಿಯೊಬ್ಬಳು 1950ರ ಅಮೇರಿಕನ್ ಚಲನಚಿತ್ರವೊಂದರ ಒಂದು ನಾಯಿಯ ಉಲ್ಲೇಖವನ್ನು ತನ್ನ ಕವನದಲ್ಲಿ ಸೇರಿಸಿರುವುದು ನನಗೆ ಬಹಳ ಸ್ವಾರಸ್ಯಕರ ಸಂಗತಿ ಎಂದನಿಸಿತು.  ಕವನ ಓದಿದಾಗ ‘ಒಲ್ಡ್ ಯೆಲರ್’ ಏನೂಂತ ಆರ್ಥವಾಗಲಿಲ್ಲ.  ನೋಡಿಬಿಡುವಾಂತ ‘ಗೂಗಲ್’ನಲ್ಲಿ ಹಾಕಿದಾಗ ಇಷ್ಟೆಲ್ಲಾ ಗೊತ್ತಾಯಿತು. 


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...