Saturday, July 23, 2022

ಅಡಗುವುದು ಹುಡುಕುವುದು - RAMUNĖ BRUNDZAITĖ's 'HIDE AND SEEK'

ಮೂಲHIDE AND SEEK

ಕವಿರಾಮುನ್ ಬ್ರುಂಡ್ಜಾಯಿಟ್ಲಿಥಿವೇನಿಯಾ

RAMUNĖ BRUNDZAITĖ, Lithuania 

Translated from the Lithuanian 

into English by RIMAS UZGIRIS

ಕನ್ನಡ ಅನುವಾದ: ಎಸ್ ಜಯಶ್ರೀನಿವಾಸ ರಾವ್

 


ಅಡಗುವುದು ಹುಡುಕುವುದು

 

ಈ ನಗರ ತುಂಬಾ ಚಿಕ್ಕದು ಅಡಗಿಕೊಳ್ಳುವುದಕ್ಕೆ:

ಹೇಗಾದರೂ ಸಿಕ್ಕೇ ಸಿಗುತ್ತಾರೆ ನಿನಗೆ 

ನೀನು ಭೇಟಿಯಾಗಲೇ ಬೇಕೆನ್ನುವ ಎಲ್ಲರೂ 

ನೀನು ಭೇಟಿಯಾಗಲು ಬಯಸದವರು ಕೂಡ...

 

ಹೆಚ್ಚಾಗಿ ಮಾಲ್‌ಗಳಲ್ಲಿ:

ಷ್ಟೊಂದು ಇದಾವೆ, ಅದೆಷ್ಟು ದೊಡ್ಡವು,

ಅಷ್ಟೇ ಅನಾಮಕ

ದರೂ ನೀನು ಸರ್ಫ಼್ ಡಬ್ಬಿಗಳ ಹಿಂದೆ ಅಡಗಿಕೊಳ್ಳುವೆ

(ನಿರ್ಮಲ ಆತ್ಮದ ಒಂದು ನವಿರಾದ ಸಂಕೇತದಂತೆ)

 

ಹಲವರು ಹೇಳುವರು ಎಲ್ಲರಿಗೂ ಕಾಣುವಂತೆ 

ಅಡಗಿಕೊಳ್ಳುವುದೇ ಉತ್ತಮವೆಂದು

ಎಂದೇ, ನಾನು ಮೂರ್ತ ಪದಗಳ ಮತ್ತು 

ವ್ಯಕ್ತ ಜನರ ಪಕ್ಕದಲ್ಲಿ ನಿಂತುಕೊಳ್ಳುವೆ – 

ಅಲ್ಲಿ ನಾನು ನಿಮಗೆ ಸುಲಭವಾಗಿ ಸಿಗುತ್ತೇನೆ

ಅಲ್ಲಿ ನನಗೊಂದು ಹೆಸರಿದೆ, ಕುಲನಾಮವಿದೆ

ನನ್ನ ಹೆಸರಿನ ಗುರುತಿನ ಕಾರ್ಡ್ ಇದೆ,

ನಿಗದಿತ ಮೌಲ್ಯವೊಂದಿದೆ 

ಅಚ್ಚುಕಟ್ಟಾದ ಸಂಖ್ಯೆಗಳ ಪಟ್ಟಿಯಲ್ಲಿದ್ದಂತೆ,

ಪ್ಲಾಸ್ಟಿಕ್ ಕಪ್ ನಲ್ಲಿ ಕಾಫಿ, ನಮ್ಮ ಸೋದರರೊಂದಿಗೆ 

ಏಕಾಂತದಲ್ಲಿ ಹಂಚಿಕೊಳ್ಳುವ ಸಿಗರೇಟುಗಳು, 

ಅವುಗಳನ್ನು ಒಬ್ಬರಿಂದೊಬ್ಬರಿಗೆ ಸುತ್ತಿಸುತ್ತಾ 

ದಿಂಗಿಣಹಾಕಿದಂತೆ ... 

 

ಈ ನಗರ ತುಂಬಾ ಚಿಕ್ಕದು ಅಡಗಿಕೊಳ್ಳುವುದಕ್ಕೆ

ಬಹಳ ದೊಡ್ಡದು ಹುಡುಕಿಹಿಡಿಯುವುದಕ್ಕೆ


*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...