Wednesday, August 17, 2022

ಕಾಡ ಮಲೆಗಳು - GEORGE LAMMING's 'FOREST HILLS'

ಮೂಲ: FOREST HILLS 

ಕವಿ: ಜಾರ್ಜ್ ಲ್ಯಾಮಿಂಗ್, ಬಾರ್ಬೆಡೊಸ್ (ವೆಸ್ಟ್ ಇಂಡೀಸ್/ ದಿ ಕರಿಬಿಯನ್) 

George Lamming, Barbados (West Indies/The Caribbean)

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್


 

ಕಾಡ ಮಲೆಗಳು

 

ಬೆಟ್ಟದಷ್ಟು ಭಯ ಹುದುಗಿದೆ ಆ ಒಂದು ಹಿನ್ನೋಟದಲ್ಲಿ,

ಬೆರಗುಗೊಳಿಸುವ ಗುಪ್ತ ಹಸಿರು ಕಿರುಕಣಿವೆಗಳು ಅಯಸ್ಕಾಂತದಂತೆ 

ಅಂಟಿಕೊಳ್ಳುತ್ತವೆ ಪಯಣಿಗನ ನಡುಗುವ ಹೆಜ್ಜೆಯೊಂದಿಗೆ.

ಆರುವ ಬೆಂಕಿಗೆ  ಕ್ಷೀಣವಾದ ತುತ್ತೂರಿ ಊದುವ ಮೊದ್ದು ಮಗುವಿನ ಹಾಗೆ

ನೋಡು, ಮಾನವ ಶಕ್ತಿ ಹೇಗೆ, ಭಯಹುಟ್ಟಿಸುವ ಹುಲ್ಲುಗಳ ಮಧ್ಯೆ  

ದಾರಿ ಕೊರೆಯುತ್ತಾ ಹೋಗಿದೆ,

ಮತ್ತೆ ಬಿಳಿಚಿದ, ಕೊರೆಯುವ ಮಾನವ ಹೆಜ್ಜೆಗುರುತುಗಳು ಹೇಗೆ

ರೋಮಾಂಚನ ಕೋರುವವರಿಗೆ ದಾರಿ ಬಿಡಿಸಿದೆ

ಅವರ ಬೆರಳತುದಿಗಳ ಸುತ್ತ ಏರುತ್ತಿಳಿಯುತ್ತಾ ಕುಣಿಯುತ್ತಾ.  

ದರೂ, ಹಿಂಬಾಲಿಸುತ್ತಾ ಹೋಗು, ಓ ಅಪರಿಚಿತನೆ, 

ಹಿಂಬಾಲಿಸುತ್ತಾ ಹೋಗು

ಆ ಪಥಗಳು ನೋಡು ಹೇಗೆ ಚಲಿಸುತ್ತಿವೆ ಲೀಲಾಜಾಲವಾಗಿ ನೋವಿನಿಂದ ತಿರುಚಿಕೊಂಡು 

ರಕ್ತದ ವಿಷಭೋಗದಿಂದ ಧೈರ್ಯ ತುಂಬಿಸಿಕೊಂಡ ಹಾವುಗಳಂತೆ 

ನಿನ್ನ ಸಾಮರ್ಥ್ಯವ ಗಟ್ಟಿಯಾಗಿ ಅಪ್ಪಿಕೊ, ನಡೆ ನೀನು 

ಮಾನವ ಹೆಜ್ಜೆಗಳಿಂದ ಮಾಡಿದ ಗಾಯಕಲೆಗಳ ಸಾಲಿನ ಮೇಲೆ
ಹಿಂಬಾಲಿಸುತ್ತಾ ಹೋಗು, ಓ ಅಪರಿಚಿತನೆ, ಹಿಂಬಾಲಿಸುತ್ತಾ ಹೋಗು,

ಒಂದು ಎಲೆಯ ಸ್ಪರ್ಶದಲ್ಲಿ ನೀನು ಭಯವನರಿಯುವೆ. 

ಪ್ರಿಲ್ ಮಾಸದ ಸಾಯಂಕಾಲದ ತಂಪಿನಲಿ ಹುಲ್ಲಿನ ಮೇಲೆ ಚಾಚಿಬಿದ್ದಿದೆ,

ಲೆಗಳ ಮಧ್ಯೆ ಅರೆ-ಅಡಗಿರುವ ಸೂರ್ಯ, ಅಲೆಗಳ ಬಡಿತ,

ಬಿಸಿಲು-ಕಲಿತ ಬಂಡೆಗಳೆದುರು ನೀನು ನಿನ್ನ ಸ್ವಾತಂತ್ರ್ಯ ಗೀತೆ ಹಾಡುವೆ,

ನೋಡುವೆ ನೀನು ಜಡೆಗಟ್ಟಿದ  ಮಲೆಗಳ ಜಾಲವನ್ನು

ನಿನ್ನ ಖಯಾಲಿಯ ಆಡಲು ಬಿಡು ಕಣ್ಣಾಮುಚ್ಚಾಲೆ

ಅವುಗಳ ಪಯಿರುಪಚ್ಚೆಯಡಿಯಲ್ಲಿ ಬೀಡುಕಟ್ಟಿರುವ ಗೋಜಲಾದ ಗೂಢತೆಯ ಸುತ್ತ   

ದರೂ, ಹಿಂಬಾಲಿಸುತ್ತಾ ಹೋಗು, ಓ ಅಪರಿಚಿತನೆ, 

ಹಿಂಬಾಲಿಸುತ್ತಾ ಹೋಗು

ಈ ಏರಿಳಿಯುವ ದಾರಿಗಳು ಕುಂಟುತ್ತಿವೆ ರುಗೋಲ ಹಿಡಿದವರಂತೆ,

ನಿನ್ನ ಭಯವನ್ನು ಹೊದೆದು ನುಸುಳಿ ಹೋಗು ಅರಕ್ಷಿತನಾಗಿ ಪಾರಿವಾಳದಂತೆ 

ಮುಳ್ಳುಪೊದೆ-ಜಾಲದ ಮೌನದಂತೆ ನಿನ್ನ ಸೇವೆಗಾಗಿ 

ಕಾಯುತ್ತಿರುವ ಆ ಪರ್ಣಸಮೂಹದೊಳಗೆ 

ಕಣ್ಣುಗಳ ಮುಚ್ಚಿಕೊ, ರೆಪ್ಪೆಗಳ ಮೂಲಕ ಸೂರ್ಯಕಿರಣಗಳು ಸೋಸಿಬರಲಿ   

ನಿನ್ನ ರಕ್ತ-ವೇಗವ ಚುರುಕುಗೊಳಿಸುವ ನೆಗೆತ

ಅಡವಿ-ಕೊಳದ ಸ್ಥಿರಲಯವಾಗುವವರೆಗೆ. 

ಮೇಲೆ, ನಿನ್ನ ಭಯದ ಸುತ್ತ ಶವಹೊದಿಕೆಯಂತಿರುವ

ಎಲೆಗಳ ಮಧ್ಯೆ ಗಾಳಿ ನಲಿಯುತ್ತ ಬಂದಾಗ

ನಿನಗೆ ಕೇಳಿಬರುವುದು ಆಗ ಕಾಡು ಬೆಂಕಿಗಳ 

ಚಟಪಟ ಸಂಗೀತದ ಭಂಗುರ ರಾಗಗಳು.

 

*****



No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...