Saturday, August 27, 2022

ಹಳ್ಳಿಗಳಲ್ಲಿ ದೇವರು ಗರ್ಭಗ್ರಹಗಳಲ್ಲಿ ಮಾತ್ರ ಇರುವುದಿಲ್ಲ JOSEPH BRODSKY's 'IN VILLAGES GOD DOES NOT LIVE IN ICON CORNERS'

ಮೂಲ: IN VILLAGE GOD DOES NOT LIVE 

ONLY IN ICON CORNERS

ಕವಿಜೊಸೆಫ಼್ ಬ್ರಾಡ್ಸ್ಕಿರಶಿಯ-ಅಮೇರಿಕ

JOSEPH BRODSKY, Russia-America

Translated from the Russian by George L. Kline

ಕನ್ನಡ ಅನುವಾದಎಸ್ಜಯಶ್ರೀನಿವಾಸ ರಾವ್

 


ಹಳ್ಳಿಗಳಲ್ಲಿ ದೇವರು ಗರ್ಭಗ್ರಹಗಳಲ್ಲಿ 

ಮಾತ್ರ ಇರುವುದಿಲ್ಲ

 

ಹಳ್ಳಿಗಳಲ್ಲಿ ದೇವರು ಗರ್ಭಗ್ರಹಗಳಲ್ಲಿ ಮಾತ್ರ

ಇರುವುದಿಲ್ಲಜರೆಯುವವರು ವಾದಿಸುವಂತೆ,

ಇರುತ್ತಾನೆ ಎಲ್ಲ ಕಡೆಮರೆಯಿಲ್ಲದೆ.  

ಒಂದೊಂದು ಸೂರನ್ನುಬಾಣಲೆಯನ್ನು

ಪಾವನಗೊಳಿಸುತ್ತಾನೆ,

ಪ್ರತಿಯೊಂದು ದ್ವಿದ್ವಾರವನ್ನು ತೆರೆಯುತ್ತಾನೆ.

 

ಹಳ್ಳಿಗಳಲ್ಲಿ ದೇವರು ಧಾರಾಳವಾಗಿ ಕೊಡುತ್ತಾನೆ – 

ಶನಿವಾರಗಳಂದು ಕಬ್ಬಿಣದ ಪಾತ್ರೆಗಳಲ್ಲಿ

ಬೇಳೆಸಾರು ಮಾಡುತ್ತಾನೆ,

ಮಿಣಿಮಿಣಿಸುವ ಬೆಂಕಿಬೆಳಕಿನಲ್ಲಿ

ಹಾಯಾಗಿ ಕುಣಿಯುತ್ತಾನೆ,

ಇವೆಲ್ಲಕ್ಕೂ ಸಾಕ್ಷಿಯಾಗಿರುವ

ನನ್ನ ನೋಡಿ ಕಣ್ಣುಮಿಟುಕಿಸುತ್ತಾನೆ.

 

ಬೇಲಿಯೊಂದ ಕಟ್ಟುತ್ತಾನೆಕನ್ಯಾದಾನ ಮಾಡುತ್ತಾನೆ

(ಮದುಮಗನೊಬ್ಬ ವನಪಾಲಕ), ಮತ್ತೆ

ತಮಾಷೆಗೆಂದುಬೇಟೆಗಾರನ ಗುಂಡು

ಎಂದೂ ಬಾತುಕೋಳಿಗೆ ತಗಲದಂತೆ ನೊಡಿಕೊಳ್ಳುತ್ತಾನೆ.

 

ಶರತ್ಕಾಲ ಹಿಮಸುರಿತದ ಸಿಳ್ಳೆಶಬ್ಧಗಳ ಮಧ್ಯೆ,

ಇವೆಲ್ಲವನ್ನು ಅರಿಯುವನೊಡುವ ಅವಕಾಶ,

ನನ್ನ ಮಟ್ಟಿಗೆದೊಂದೇ ಹಳ್ಳಿಯ ನಾಸ್ತಿಕನಿಗೆ

ತೆರೆದಿರುವ ಪರಮಾನಂದದ ದ್ವಾರ.

 

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...