Tuesday, August 23, 2022

ಯಾಕಿಷ್ಟು ಕತ್ತಲು ನಿನ್ನ ಕವನಗಳಲ್ಲಿ? - LINDA PASTAN's 'WHY ARE YOUR POEMS SO DARK?'

ಕೆಲ ದಿನಗಳ ಹಿಂದೆ ಮಿತ್ರರಾದ ಕಮಲಾಕಾರ ಕಡವೆಯವರು Kamalakar Bhat ಅಮೇರಿಕದ ಕವಿ ಲಿಂಡಾ ಪ್ಯಾಸ್ಟನ್-ರ (Linda Pastan) ಕವನ "Why Are Your Poems so Dark?"-ನ್ನು ಇಲ್ಲಿ ಪೋಸ್ಟ್ ಮಾಡಿದ್ದರು. ಸುಮಾರು ಜನ ಕಾವ್ಯಾಸಕ್ತರು ಈ ಕವನವನ್ನು ಇಷ್ಟಪಟ್ಟರು. ಈ ಕವನದ ಕನ್ನಡ ಅನುವಾದವೂ ಆಗಿದೆ ಎಂದು ತಿಳಿಯಿತು. ಕಮಲಾಕಾರ-ರವರು ಈ ಕವನದ ಅನುವಾದ ಮಾಡಿಲ್ಲ; ಆದರೆ ಪ್ರಯತ್ನ ಜಾರಿಯಲ್ಲಿದೆ ಎಂದರು. ನನ್ನ ಮೆಚ್ಚಿನ ‘ಮೆಟಾ-ಕವನ’ ಶೈಲಿಯಲ್ಲಿರುವ ಈ ಕವನ ನನಗೆ ಬಹಳ ಇಷ್ಟವಾಯಿತು. ಕನ್ನಡಕ್ಕೆ ಅನುವಾದ ಮಾಡಿದೆ; ಕಮಲಾಕರ-ರ ಪೋಸ್ಟ್-ನ ಎಳೆಯಲ್ಲೇ ನನ್ನ ಅನುವಾದವನ್ನೂ ಪೊಸ್ಟ್ ಮಾಡಿದೆ. ಕಮಲಾಕರ-ರಿಗೆ ಇಷ್ಟವಾಯಿತು. ಶಿವರಾಜ್ ಬೆಟ್ಟದೂರ-ರು Shivaraj Bettadur ನನ್ನ ಅನುವಾದದ ಶೀರ್ಷಿಕೆಯ ಪದಬದಲಿ ಮಾಡಿ ಅದರ ಅಂದ ಹೆಚ್ಚಿಸಿದ್ದಾರೆ. ಮೊದಲ ಎರಡು ಸಾಲುಗಳು ಅಷ್ಟಾಗಿ ಹಿಡಿಸಲಿಲ್ಲ, ಉಳಿದದ್ದು ಓಕೆ ಎಂದರು. ಅದೂ ಒಳ್ಳೆಯದೇ. ಈ ಅನುವಾದವನ್ನು ಸೆಪರೇಟಾಗಿ ಪೋಸ್ಟ್ ಮಾಡುವಾಂತ ... ಎಲ್ಲಾ ತರಹದ ಸಲಹೆಗಳು ಸ್ವಾಗತ ... ಒಳಗೂಡಿಸಲು ಆದಷ್ಟು ಪ್ರಯತ್ನ ಮಾಡುವೆ ... ಈ ಕವನವನ್ನು ಹುಡುಕಿ ನಮ್ಮೆಲ್ಲರಿಗೆ ತೋರಿಸಿ, ಓದಿಸಿದ್ದಕ್ಕೆ ಕಮಲಾಕರ ಕಡವೆಯವರಿಗೆ ಧನ್ಯವಾದಗಳು ... 22 July 2022


ಮೂಲ: WHY ARE YOUR POEMS SO DARK?
ಕವಿ: ಲಿಂಡಾ ಪ್ಯಾಸ್ಟನ್, ಅಮೇರಿಕ LINDA PASTAN, USA
ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

ಯಾಕಿಷ್ಟು ಕತ್ತಲು ನಿನ್ನ ಕವನಗಳಲ್ಲಿ?

ಚಂದಿರನಲ್ಲಿ ಕೂಡ ಹೆಚ್ಚಾಗಿ
ಕತ್ತಲ ದಿನಗಳೇ ಅಲ್ಲವಾ?
ಮತ್ತೆ ಆ ಬಿಳಿ ಹಾಳೆ
ಖಾಲಿ ಖಾಲಿ ಎನಿಸುವುದಿಲ್ಲವೆ
ಅಕ್ಷರಗಳ ಕಪ್ಪು
ಕಲೆಗಳ ವಿನಾ?
ದೇವ ಬೆಳಕು ಬೇಕೆಂದಾಗ,
ಅಂವ ಕತ್ತಲೆಯನ್ನು ಹೊರಗಟ್ಟಲಿಲ್ಲ.
ಬದಲಾಗಿ ಅಂವ ಕಾಗೆಗಳನ್ನು
ಕರಿಮರಗಳನ್ನು ಸೃಷ್ಟಿಸಿದ
ನಿನ್ನ ಎಡ ಕಪೋಲದಲ್ಲಿರುವ ಆ
ಸಣ್ಣ ಮಚ್ಛೆಯನ್ನು ಕೂಡ.
ಇಲ್ಲಾ, “ನೀನ್ಯಾಕೆ ಯಾವತ್ತೂ ಇಷ್ಟು ಬೇಸರದಿಂದಿರುತ್ತಿ?”
ಎಂದು ಕೇಳುವ ಉದ್ದೇಶವಿತ್ತೊ ನಿನಗೆ?
ಚಂದಿರನನ್ನು ಕೇಳು.
ಅಂವ ಏನು ನೋಡಿದ್ದನೆಂದು ಕೇಳು.

*****



WHY ARE YOUR POEMS SO DARK?

Isn't the moon dark too,
most of the time?
And doesn't the white page
seem unfinished
without the dark stain
of alphabets?
When God demanded light,
he didn't banish darkness.
Instead he invented
ebony and crows
and that small mole
on your left cheekbone.
Or did you mean to ask
"Why are you sad so often?"
Ask the moon.
Ask what it has witnessed.

--- Linda Pastan 

No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...