Thursday, September 8, 2022

ನಿವೇದನೆ - ANNA AKHMATOVA's 'DEDICATION to REQUIEM'

1935 ಮತ್ತು 1961 ರ ಅವಧಿಯಲ್ಲಿ ಅನಾ ಅಖ್ಮತೋವಾ-ರು REQUIEM ‘ರೆಕ್ವಿಯೆಮ್’ (ಚರಮಗೀತೆ) ಎಂಬ ಹೆಸರಿನಡಿಯಲ್ಲಿ ಹತ್ತು ಸಣ್ಣ ಕವನಗಳನ್ನು ಬರೆದರು.  ಸೋವಿಯತ್ ಯೂನಿಯನ್-ನಲ್ಲಿ ಸ್ಟಾಲಿನ್-ನ ಮಹಾ ಶುದ್ಧೀಕರಣ’ದ (GREAT PURGE) ಅಭಿಯಾನದಲ್ಲಿ ಸಾಮಾನ್ಯ ಜನರು ಅನುಭವಿಸಿದ ದುಃಖ, ನೋವು, ಕೋಪ, ಹತಾಶೆಗಳನ್ನು ಈ ಕವನಗಳು ಬಿಂಬಿಸುತ್ತವೆ.  ಇದೇ ಅಭಿಯಾನದಲ್ಲಿ ತನ್ನ ಗಂಡನ ಮತ್ತು ಅವರ ಸಹಚರರ ಕೈದು ಹಾಗೂ ಸೋವಿಯತ್ ಗುಪ್ತ ಪೊಲಿಸರಿಂದ ತನ್ನ ಮಗನ ಬಂಧನದಿಂದಾಗಿ ಅನುಭವಿಸಿದ ದುಃಖ, ಸಂಕಟಗಳನ್ನು ಅವರು ಈ ಕವನಗಳಲ್ಲಿ ಬಿಡಿಸಿದ್ದಾರೆ.  ಮುಂದೆ ಹೋಗುತ್ತಾ, “ರೆಕ್ವಿಯೆಮ್” ಎಂಬ ಈ ಹತ್ತು ಸಣ್ಣ ಕವನಗಳ ಸರಣಿ ಸ್ಟಾಲಿನ ನಡೆಸಿದ ‘ಮಹಾ ಭೀತಿ’ಯ (GREAT TERROR) ಬಗ್ಗೆ ಬರೆದ ಅತಿ ಮುಖ್ಯ ಕವನಕೃತಿಯೆಂದು ಹೆಸರು ಪಡೆಯುತ್ತದೆ.  ಈ ಕವನಕೃತಿಗೆ ಅಖ್ಮತೋವಾ-ರು ಒಂದು ಸಣ್ಣ ಗದ್ಯ ಪ್ರಸ್ತಾವನೆ ಬರೆದಿದ್ದಾರೆ ಹಾಗೂ ಪದ್ಯ ರೂಪದಲ್ಲಿ ಒಂದು ‘ನಿವೇದನೆ’ (DEDICATION) ಬರೆದಿದ್ದಾರೆ.  ಈ DEDICATION-ನ್ನು ಕನ್ನಡಕ್ಕೆ ಅನುವಾದಿಸುವ ನನ್ನದೇ ಒಂದು ಪ್ರಯತ್ನ ಮಾಡಿರುವೆ...     


ಮೂಲ: DEDICATION to REQUIEM 

ಕವಿ: ಅನಾ ಅಖ್ಮತೊವಾ, ರಶಿಯಾ 

ANNA AKHMATOVA, RUSSIA

Translated from the Russian by 

Lenore Mayhew and William McNaughton 

(ANNA AKHMATOVA: POEM WITHOUT A HERO 

AND SELECTED POEMS )

ಕನ್ನಡ ಅನುವಾದ: ಎಸ್. ಜಯಶ್ರೀನಿವಾಸ ರಾವ್

 


ನಿವೇದನೆ

 

ಈ ದುಃಖದ ಮುಂದೆ ಪರ್ವತಗಳು ಬಾಗಬೇಕು

ನದಿಗಳು ನಿಲ್ಲಬೇಕು,

ದರೆ ಜೈಲಿನ ಬೀಗಗಳು ಗಟ್ಟಿ,

ಅವುಗಳ ಹಿಂದೆ ಇವೆ ಕೈದಿಗಳ 

ಲೇಬರ್-ಕ್ಯಾಂಪಿನ ಅಟ್ಟ-ಮಂಚಗಳು,

ಆ ಮಾರಕ ನೀರಸತೆ.

ಮಿಕ್ಕವರಿಗೆ ತಾಜಾ ಗಾಳಿ ಬೀಸುತಿದೆ,

ಮಿಕ್ಕವರಿಗೆ ಅತಿರಂಜಿತ ಸೂರ್ಯಾಸ್ತಗಳಿವೆ – 

ನಮಗೊ ಎಲ್ಲಾ ಅದೇ, ನಮಗೇನೂ ಗೊತ್ತಿಲ್ಲ,

ನಮಗೆ ಕೇಳುತ್ತೆ ಬೀಗದಕೈಗಳು ಹಾಗೂ

ಅವುಗಳ ದ್ವೇಷ ಕೆರಳಿಸುವ ಅರೆತ ಮಾತ್ರ. 

ಸೈನಿಕರ ಬಿಗಿ ಹೆಜ್ಜೆಗಳು ಮಾತ್ರ.

ನಾವು ಏಳುವೆವು ಬೆಳಗ್ಗಿನ ಆರಾಧನೆಗೆಂದು 

ಹೋಗುವೆವು ನಗರದೆಡೆಗೆ, 

ಛಿದ್ರವಿಚ್ಫಿದ್ರವಾದ ನಗರದೆಡೆಗೆ, 

ತಿರುಗಿ ಬರುವಾಗ

ನಮ್ಮನೇ ನಾವು ಭೇಟಿಯಾಗುವೆವು, 

ಸತ್ತವರನ್ನು, ಉಸಿರಿಲ್ಲದವರನ್ನು.

ಸೂರ್ಯ ಕೆಳಗಿಳಿದಿದ್ದಾನೆ, 

ನೆವಾ ನದಿಯ ಮೇಲೆ ಮಂಜು ಕವಿದಿದೆ,

ದೂರದಲ್ಲೆಲ್ಲೋ ಆಶೆ ಹಾಡುತಿದೆ.

ಆ ತೀರ್ಪು-ವಾಕ್ಯ ... ತತ್‌ಕ್ಷಣ ಕಣ್ಣೀರು,

ಎಲ್ಲವನ್ನೂ ಕಿತ್ತುಕೊಂಡರು,

ಅವಳ ಉಳಿದ ಬದುಕು, ಅವಳ ಹೃದಯದಿಂದ ಹರಿದರು,

ನೆಲಕ್ಕುರುಳಿಸಿದ ಅವಳನ್ನು ಒಬ್ಬ ಪುಂಡ

ದರೂ ಅವಳು ನಡೆಯುತ್ತಿದ್ದಾಳೆ ... ಎಡವುತ್ತಿದ್ದಾಳೆ ... ಒಬ್ಬಳೇ ... 

ಲ್ಲಿದ್ದಾರೆ ಅವರೆಲ್ಲರೂ, ನರಕದಲ್ಲಿ ಜತೆಗೆ ವರುಷಗಳ 

ಕಳೆದ ಲ್ಲದ ಗೆಳೆಯರು?

ಸೈಬೀರಿಯಾದ ಹಿಮಗಾಳಿಯಲ್ಲಿ ಯಾವ 

ಅತಿಮಾನುಷದೃಶ್ಯಗಳು ಕಾಣುತ್ತಿವೆ ಅವರಿಗೆ?

ಚಂದ್ರನ ವರ್ತುಲದಲ್ಲಿ ಯಾವ 

ಭ್ರಾಂತಿಗಳ ದರ್ಶನವಾಗುತ್ತಿವೆ ಅವರಿಗೆ?

ಅವರೆಲ್ಲರಿಗೂ ಈ ವಿದಾಯವನ್ನು ಕಳಿಸುವೆ

ಅವರೆಲ್ಲರಿಗೂ ಒಳಿತಾಗಲಿ ಎಂದು ಬಯಸುವೆ

*****


No comments:

Post a Comment

ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...