Sunday, March 14, 2021

ಇರುವೆಗಳ ಗುಂಪೆಯನ್ನು ನಾಶಿಸುವ ನನ್ನ ಕೈ - IRUVEGALA GUMPEYANNU NAASHISUVA NANNA KAI - FERNANDO PESSOA'S "MY HAND THAT DESTROYS"

ಮೂಲ: My hand that destroys

ಕವಿ: Fernando Pessoa, Portuguese ‌‌‌ಫೆರ್ನಾಂಡು ಪೆಸೊವ (writing as Ricardo Reis)

Translated from the Portuguese into English by Richard Zenith

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

 

ಇರುವೆಗಳ ಗುಂಪೆಯನ್ನು ನಾಶಿಸುವ ನನ್ನ ಕೈ

 

ಇರುವೆಗಳ ಗುಂಪೆಯನ್ನು 

ನಾಶಿಸುವ ನನ್ನ ಕೈ

ಅವುಗಳಿಗೆ ದಿವ್ಯ ಮೂಲದ್ದು ಅಂತನಿಸಿರಬಹುದು

ಆದರೆ ನಾನು ದಿವ್ಯ ಅಂತ ನಾನಂದುಕೊಳ್ಳುವುದಿಲ್ಲ

                  ಹಾಗೆಯೇ ದೇವರುಗಳು

                  ಬಹುಶಃ ತಮ್ಮನ್ನು 

ದೇವರುಗಳೆಂದು ನೋಡುವುದಿಲ್ಲ, ನಮ್ಮ ದೃಷ್ಟಿಯಲ್ಲಿ

ದೇವರುಗಳಾಗಿದ್ದಾರೆ ಏಕೆಂದರೆ ನಮಗಿಂತ ದೊಡ್ಡವರೆಂದು ಅಷ್ಟೇ.

                  ಆ ಮಾತು ಹಾಗಿರಲಿ,

                  ನಾವು ಯಾವುದೇ ಒಂದು

ಮತಕ್ಕೆ, ಪ್ರಾಯಶಃ ಬುಡವಿಲ್ಲದ, ನಾವು ದೇವರುಗಳೆಂದು 

ನಂಬುವವರಲ್ಲಿ ಸಂಪೂರ್ಣವಾಗಿ ನಂಬಿಕೆಯಿಡುವುದು ಬೇಡ. 



Wednesday, March 10, 2021

CALM BEFORE DAWN - SUBRAYA CHOKKADY'S 'NISHAANTHA' ನಿಶಾಂತ

Kannada original: ನಿಶಾಂತ Nishaantha

Poet: Subraya Chokkady

Translated into English by: S. Jayasrinivasa Rao

 

CALM BEFORE DAWN

 

Across the mist-blanketed path

the sound of the night sliding past

its echo resonating 

among the leaves,

in the mysterious swirls of the lake,

in the cascading fragrance of the blossoming buds,

in the silence of the mountain peak,

on the eyelids of the sky...

 

Adding their cadence to

the rhythm of this movement

are the heartbeats of those 

who are still deep in slumber and

tiny footsteps in birds’ nests ... 

 

*****

Tuesday, March 9, 2021

ಗೋಧೂಳಿಯ ಸಮಯ - GODHOOLIYA SAMAYA - SRINIVAS RAYAPROL'S "GODHULI TIME"

ಮೂಲ: GODHULI TIME

ಕವಿ: SRINIVAS RAYAPROL ಶ್ರೀನಿವಾಸ ರಾಯಪ್ರೋಲು

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

 

ಗೋಧೂಳಿಯ ಸಮಯ

 

ಇದು ಗೋಧೂಳಿಯ ಸಮಯ

ಈ ಮಣ್ಣಿನ ದಾರಿಯಲ್ಲಿ ನಡೆಯುತ್ತಿರಬೇಕಾದರೆ

ನನ್ನ ತಲೆಯ ಮೇಲೆ ದಟ್ಟವಾಗಿ ಕೂತಿದೆ ಹೊಗೆಯ ಮೋಡ

ಒಳಗಿನ ಸುಟ್ಟ ಹಾಲಿನ ವಾಸನೆಗಳ ಜತೆ

ಹೊರಗಿನ ಗದ್ದೆಗಳ ವಾಸನೆಗಳು ಬೆರೆಯುತ್ತವೆ

 

ರಸ್ತೆಯ ಮೂಲೆ ತಲುಪಿ ತಿರುಗಿದಾಗ

ಹುಲ್ಲುಕಟ್ಟೆಯ ಪಕ್ಕದಲ್ಲಿ ಕೂತಿದ್ದ

ಒಂದು ಜೋಡಿಯನ್ನು ಚಕಿತಗೊಳಿಸಿದೆ

ಇನಿಮಾತುಗಳೆಲ್ಲವನ್ನೂ ಪಿಸುಗುಟ್ಟುತಿದ್ದರವರು

ಅವಳು ನಕ್ಕು ಹಾರುವಳು

ಹಕ್ಕಿಯಂತೆ, ಅವಳ ಗೆಜ್ಜೆಗಳು

ರಿಂಗಣಿಸುತ್ತಾ, ಅವಳ ಕನ್ನಡಿ ಹೊಸೆದ ಲಂಗ ಪಟಪಟಿಸುತ್ತಾ

ಅವನಾಗ ಪೆದ್ದುಪೆದ್ದಾಗಿ ಹಲ್ಲೆಡೆಯಿಂದ 

ಹುಲ್ಲುಕಡ್ಡಿಯೊಂದನ್ನು ಎಳೆಯುತ್ತಾ.

 

ಇದು ಗೋಧೂಳಿಯ ಸಮಯ

ಕತ್ತಲು ಇನ್ನು ಕೆಲವೇ ನಿಮಿಷಗಳ ದೂರ

ಪಶು ಪಕ್ಷಿ ಮನುಜ

ಮನೆ ಕಡೆಗೆ ಕರೆವ

ಮಿಣುಕು ದೀಪಗಳತ್ತ ತಿರುಗುವರು

ದೂರದಲ್ಲಿ ನನಗೆ ಕಾಣುತ್ತೆ

ಸರ್ರನೆ ಹಾದ ರೈಲುಗಾಡಿಯ ಬೆಳಗಿದ ಕಿಂಡಿಗಳು

ನನ್ನನ್ನು ಇಲ್ಲಿ ಕರೆತಂದ ರೈಲುಗಾಡಿ

ನನ್ನ ಯೋಚನೆಗಳು ಪಯಣಿಸುತ್ತವೆ

ನನ್ನ ಎಂದೂ ಇಲ್ಲದ ಮನೆಯತ್ತ.

*****



Saturday, March 6, 2021

BUTTERFLY - H. S. SHIVA PRAKASH'S 'CHITTE' ಚಿಟ್ಟೆ

Kannada original: ಚಿಟ್ಟೆ CHITTE 

Poet: H. S. SHIVA PRAKASH

Translated into English by: S. Jayasrinivasa Rao

 

BUTTERFLY

 

A butterfly was fluttering all over the garden

A garden too was fluttering around inside the butterfly

The garden was intact

The flower was unshaken

 

The butterfly had flown away after sucking away everything

 

O’ you children who catch butterflies for your sport

O’ you grown-ups who cultivate gardens for your profit

What would you know about this affair

 

*****

THE BIRDS OF CHOKKADI - SUBRAYA CHOKKADY'S 'CHOKKADIYA HAKKIGALU' ಚೊಕ್ಕಾಡಿಯ ಹಕ್ಕಿಗಳು

Kannada original: ಚೊಕ್ಕಾಡಿಯ ಹಕ್ಕಿಗಳು  Chokkadiya Hakkigalu 

Poet: SUBRAYA CHOKKADY

Translated into English by: S. Jayasrinivasa Rao

 

THE BIRDS OF CHOKKADI

 

As in all other places,

if I say, Chokkadi too has birds,

what has actually been said?

 

As in all other places, here too

birds lay eggs, hatch chicks,

spread their wings and soar in the sky, 

they chirp and so on; these things, as I am 

aware of, you too know.  Despite this,

 

there is something special here.  I mean, 

in this town; in the unique be-ing 

of this town’s trees, plants, hills, and fields.

If birds fly amidst all these,

If birds etch silver lines on the scraggly sky,

If birds chirp their songs amid the cacophony 

of harsh human voices,

the unique tapestry that is woven thus, you see,

that even amongst these giants these birds fly carefree

and establish their existence – 

 

that, you see, that I feel

is especially applicable to Chokkadi alone.  

If you feel like, you too can come here

and see for yourselves,

and feel it.

 

*****

ಖಾಲಿ ಇನ್‌ಬಾಕ್ಸ್ - KHALI INBOX - OLGA PAPAKOSTA'S "EMPTY INBOX"

ಮೂಲ: Empty Inbox

ಕವಿ: ಒಲ್ಗಾ ಪಾಪಕೊಸ್ತಾ Olga Papakosta

Translated from the Greek into English by Karen Van Dyck


ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

 

ಖಾಲಿ ಇನ್‌ಬಾಕ್ಸ್

 

ನಿನಗೆ ಮೆಯಿಲ್ ಬಂದಿಲ್ಲ

 

ಎಲ್ಲಾ ಮೆಸೆಜ್‌ಗಳನ್ನು 

ತೆರೆದಾಗಿದೆ, ಓದಿಯಾಗಿದೆ, ಡಿಲೀಟ್ ಮಾಡಲಾಗಿದೆ

 

ಕೆಲವೇ ಕೆಲವನ್ನು ಬಿಟ್ಟು

ಮರೆಯಲಾಗದಂತವು

 

ಈ ಹೊಸ ಸ್ನೇಹಿತರು

ಹಳೆಯ ಸ್ನೇಹಿತರ 

ಹಾಗೆ ಎಂದೂ ಆಗಲಾರರು

 

ಸುಮ್ಮನೆ ಹೀಗೇ

ಕಾಲಿಂಗ್ ಬೆಲ್ ಬಾರಿಸಿ

ಮನೆಯೊಳಗೆ ಬರುವಂತಹವರಿದ್ದರು

 

*****

ಹಳದಿ ಟ್ಯಾಕ್ಸಿ - HALADI TAXI - CHLOE KOUTSOUMBELI'S "YELLOW TAXI"

ಮೂಲ: YELLOW TAXI

ಕವಿ: CHLOE KOUTSOUMBELI, Greek ಕ್ಲೋಯಿ ಕೂತ್ಸುಮ್‌ಬೆಲಿ

Translated from the Greek into English by A. E. Stallings

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

 

ಹಳದಿ ಟ್ಯಾಕ್ಸಿ

 

ಇಲ್ಲ, ಸರ್, ನೀವು ನನ್ನನ್ನು ಬೇರೆ ಯಾರ ಜತೆಗೋ ಕನ್ಫ಼್ಯೂಸ್ ಮಾಡ್ತಾ ಇದ್ದೀರಾ

ಆ ಹಳದಿ ಟ್ಯಾಕ್ಸಿಯಲ್ಲಿದ್ದದ್ದು 

ನಾನಲ್ಲ

ಅಲ್ಲದೇ, ನಾನೆಂದೂ ಹಿಂದಿನ ಸೀಟಿನಲ್ಲಿ ನಿಮ್ಮ ಜತೆ ಕೂತಿರಲಿಲ್ಲ

ಅಂದು ಹಿಮ ಬೀಳುತ್ತಿರಲಿಲ್ಲ, ನನಗೆ ಅದರ ಖಾತ್ರಿ ಇದೆ,

ಇಲ್ಲ, ಹಿಮಹಲ್ಲೆಗಳು ನನ್ನ ಕೂದಲಲ್ಲಿ ಉದುರಲಿಲ್ಲ

ಪ್ರತಿಯಾಗಿ ಹೇಳಬೇಕೆಂದರೆ, ನನಗೆ ಕೂದಲು ಇರಲಿಲ್ಲ 

ನೀವು ನನ್ನನ್ನು ಚುಂಬಿಸಲಿಲ್ಲ, ಇಲ್ಲದಿದ್ದರೆ ನನಗೆ 

ನೆನಪಿರುತ್ತಿತ್ತು

ಹಾಗೆ ನೀವೇನಾದರೂ ನನ್ನನ್ನು ಚುಂಬಿಸಿದ್ದರೆ, ನಾನು, 

ಹೇಗೂ ಅಲ್ಲಿರಲಿಲ್ಲ

ಆ ಡ್ರೈವರ್ ಕೂಡ ಒಂದು ಸಲ ಸಹ ತಲೆ ಹಿಂದೆ ತಿರುಗಿಸಲಿಲ್ಲ

ಮಾತಿಲ್ಲದೇನೇ ದಾಟಿದ ಅವನು ಸರೋವರವನ್ನು ಕೊನೇಯ ತನಕ

ಸುತ್ತಲ ಕರೀ ನೀರಿನಲ್ಲಿ

ಆಗಿಂದಾಗ ದೋಣಿಯ ಹುಟ್ಟು ಮುಳುಗುತ್ತಿತ್ತು.

 

*****



ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...