Sunday, November 29, 2020

ಕೆಲ ಮಂದಿ ಇಷ್ಟ ಪಡುತ್ತಾರೆ ಕಾವ್ಯ KELA MANDI ISHTA PADUTTAARE KAVYA - WISLAWA SZYMBORSKA'S "SOME PEOPLE LIKE POETRY"

 ಮೂಲ: Some People Like Poetry

ಕವಿ: ವೀಸ್ವಾವ ಶಿಂಬೋರ್ಸ್ಕ Wisława Szymborska, Poland

ಇಂಗ್ಲಿಷ್ ಗೆ: Stanizław Barańczak and Clare Cavanagh 

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಕೆಲ ಮಂದಿ ಇಷ್ಟ ಪಡುತ್ತಾರೆ ಕಾವ್ಯ

ಕೆಲ ಮಂದಿ -- 

ಅಂದ್ರೆ ಎಲ್ಲ್ರೂ ಅಂತಲ್ಲ,

ಹೆಚ್ಚಿನವರೂಂತ ಕೂಡ ಅಲ್ಲ, ಕೆಲವರು ಮಾತ್ರ.

ಶಾಲೆಯನ್ನು ಲೆಕ್ಕಕ್ಕೆ ತೊಗೊಳ್ಳದೇ, ಅಲ್ಲಿ ಪಡಲೇ ಬೇಕು,

ಮತ್ತು ಸ್ವತ್ಃ ಕವಿಗಳನ್ನು,

ಕೊನೆಗೆ ಸಾವಿರದಲ್ಲಿ ಇಬ್ಬರು ಸಿಗಬಹುದು ಅಂತ ಅಂದಾಜು.


ಇಷ್ಟ --

ಅಂದ್ರೆ, ನೀವು ಚಿಕನ್ ನೂಡ್‍ಲ್ ಸೂಪ್ ಇಷ್ಟಪಡಬಹುದು,

ಅಥವಾ ಹೊಗಳಿಕೆಗಳನ್ನು, ಅಥವಾ ನೀಲಿ ಬಣ್ಣ,

ನಿಮ್ಮ ಹಳೇ ಮಫ಼್ಲರ್,

ನಿಮ್ಮದೇ ದಾರಿ,

ನಾಯಿಯನ್ನು ಮುದ್ದು ಮಾಡುವುದು.


ಕಾವ್ಯ -- 

ಆದರೆ ಕಾವ್ಯ ಅಂದ್ರೆ ಕೊನೆಗೆ ಏನದು?

ಒಂದಕ್ಕಿಂತ ಹೆಚ್ಚು ಅಸ್ಥಿರ ಉತ್ತರಗಳು

ಹೊರ ಬಿದ್ದಿವೆ ಆ ಪ್ರಶ್ಣೆ ಮೊದಲು ತಲೆ ಎತ್ತಿದಾಗಿನಿಂದ.

ಆದರೆ ನನಗೆ ಮಾತ್ರ ಗೊತ್ತಾಗುತ್ತಲೇ ಇಲ್ಲದಾಗಿದೆ,

ಹಿಡಿದುಕೊಂಡಿರುವೆ ನಾನು ಅದನ್ನೇ ಗಟ್ಟಿಯಾಗಿ 

ಬಿಡುಗಡೆಯ ಕಟಾಂಜನದ ಹಾಗೆ.

*****




Thursday, November 26, 2020

WELLS IN OUR FRONTYARDS - S. BALU RAO'S KANNADA POEM 'ನಮ್ಮಂಗಳದ ಬಾವಿಗಳು' NammangaLada BaavigaLu

Kannada original: ನಮ್ಮಂಗಳದ ಬಾವಿಗಳು (1997) 

                           NammangaLada BaavigaLu

Poet: S. Balu Rao

Translated into English by: S. Jayasrinivasa Rao

 

Wells in our frontyards

 

To fall and die

they need not be

water-filled wells.

 

If you look at it that way

more people die

falling into dry wells

 

In my time

 

lots of girls

within the four walls of their homes

 

faces hidden

behind their saree veils

inside their burkhas

in wells like these sunk by their fathers and husbands

 

dying without dying

living without living

 

I have seen!
*****

ಕವಿತಾನುವಾದದ ಬಗ್ಗೆ KAVITAANUVAADADA BAGGE - ZBIGNIEW HERBERT'S 'ON TRANSLATING POETRY'

ಕವಿ: ಜ಼್ಬಿಗ್ನಿಎಫ಼್ ಹೆರ್ಬೆರ್ತ್ Zbigniew Herbert, Poland

ಮೂಲ: On Translating Poetry; translated from the original Polish by Alissa Valles

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ಕವಿತಾನುವಾದದ ಬಗ್ಗೆ

ಒಂದು ಅಡ್ನಾಡಿ ಹೆಜ್ಜೇನಿನ ತರ  

ಅಂವ ಒಂದು ಹೂವಿನ ಮೇಲೆ ಇಳಿದ

ನಾಜೂಕಾದ ಕಾಂಡವನ್ನು ಬಗ್ಗಿಸುತ್ತಾ


ಹೂದಳಗಳ ಸಾಲುಗಳನ್ನು

ತಳ್ಳಿಕೊಂಡು ಮುನ್ನುಗ್ಗಿದ

ನಿಘಂಟಿನ ಪುಟಗಳನ್ನು 

ಮಗುಚುವ ಹಾಗೆ


ಹೋಗಬೇಕು ಅವನಿಗಲ್ಲಿ

ಕಂಪು ಇಂಪು ಇರುವಲ್ಲಿ

ಅವನಿಗೆ ನೆಗಡಿಯಾಗಿದ್ದರೂ

ನಾಲಿಗೆ ರುಚಿ ಇಲ್ಲದಿದ್ದರೂ

ಅಂವ ನುಗ್ಗುತ್ತಲೇ ಇದ್ದ

ಹಳದಿ ಶಲಾಕೆಗೆ ತಲೆ 

ಗುದ್ದಿಕೊಳ್ಳುವವರೆಗೂ


ಅಷ್ಟೇ, ಅಲ್ಲಿವರೆಗೆ ಮಾತ್ರ ಹೋಗಬಲ್ಲ

ಬಹಳ ಕಷ್ಟ

ಪುಷ್ಪಪಾತ್ರವನ್ನು ಭೇಧಿಸಿ ಮುನ್ನುಗ್ಗಲು

ಬೇರೊಳಗೆ ಸೇರಲು


ಎಂದೇ, ಹೆಜ್ಜೇನು ಮತ್ತೆ ಮೇಲಕ್ಕೆ ಹಾರುತ್ತೆ

ಜೋರಾಗಿ ಝೇಂಕರಿಸುತ್ತಾ

ಡೌಲಿನಿಂದ ಹೊರಮೂಡುತ್ತಾನೆ


ನಾನಲ್ಲಿ ಒಳಗೆ ಹೋಗಿದ್ದೆ


ಅವನ ಮಾತನ್ನು ನಂಬದವರಿದ್ದರೆ

ಅವರು

ಅವನ ಮೂಗನ್ನು ನೋಡಬಹುದು

ಪರಾಗದ ಹಳದಿ ಹರಡಿದೆ

*****




Tuesday, November 24, 2020

Address - A. K. RAMANUJAN'S UNTITLED KANNADA POEM - 'ADDRESS'

Kannada original: Untitled

Poet: A. K. Ramanujan

Translated into English by: S. Jayasrinivasa Rao


Address

I am not here.

I live

there.

 

That address too

month after month

kept changing.

 

All kinds of reasons,

orders passed down

from above

 

government rules

strike in Bandra

murder in Bangladesh

 

children’s school

when it closes, when it reopens

summer winter floods

 

When someone gets

transferred somewhere,

 

because some doctor said

the crafty flies have bloated

and proliferated after eating

DDT sprayed during the drought,

 

I too am transferred immediately.

Because of all these, my address is

not in my hands now.

 

But, write to this address

itself, it’ll reach me somehow,

if not today, tomorrow.

Even if I’m not here

 

this is my permanent

address.

*****


ಅಮ್ಮಾ AMMA - GOPAL HONNALGERE'S "AMMA"

ಮೂಲ: Amma 

ಕವಿ: ಗೋಪಾಲ ಹೊನ್ನಲಗೆರೆ Gopal Honnalgere

ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

ಅಮ್ಮಾ

ನಮ್ಮ ಕೀಲುಗಳು ನೊಂದಾಗ

ಹಾಸಿಗೆಯಲ್ಲಿ ಮುದುಡಿಕೊಂಡು 

ಅಮ್ಮಾ ... ಅಮ್ಮಾ... ಅಂತ ನರಳುತ್ತೇವೆ

ಆಗ ಬೇರೆಲ್ಲಿಂದಲೋ ಕೇಳಿಬರುತ್ತದೆ

ನಮ್ಮಮ್ಮಂದಿರೂ ನರಳುವ ಒರಲ 

ಅಮ್ಮಾ ... ಅಮ್ಮಾ ... 

ಹಾಗೆಯೇ ನಮ್ಮಜ್ಜಿಯಂದಿರ ಒರಲು ಕೂಡ,

ಅವರಿನ್ನೂ ಬದುಕಿರುವುದಾಗಿದ್ದರೆ.


ನಮ್ಮೆಲ್ಲರ ಮುತ್ತಜ್ಜಿಯ ಅಜ್ಜಿ 

ಅವಳೊಬ್ಬಳೇ 

ಅವಳೂ ನರಳುತ್ತಿದ್ದಾಳೆ

ಅದಕ್ಕೇ ಸೀತೆ

ಮಣ್ಣಲ್ಲಿ ಒಂದಾದಳು

ಇನ್ನು ಇದಕ್ಕಿಂತ ಹೆಚ್ಚು ನೋವು

ತಡೆಯಲಾರದೇ.

*****



Thursday, November 19, 2020

ಬೆಳದಿಂಗಳಲ್ಲಿ ನಾರಿಯರು ಮತ್ತು ಹಕ್ಕಿ BELADINGALALLI NAARIYARU MATTU HAKKI - GRACE NICHOLS' 'WOMEN AND BIRD IN THE MOONLIGHT'

Dear friends ... here is my Kannada translation of Grace Nichols' English poem Women and Bird in the Moonlight. Grace Nichols hails from Guyana in the West Indies and moved to England in 1977.  This poem is inspired by the Spanish painter Joan Miro's painting of the same name.  


I have taken this poem from the delightful book of poems by Grace Nichols called Paint me a Poem: New Poems Inspired by Art in the Tate.  She did a year's residency at the Tate Art Gallery, London, which "involved responding to paintings through poetry as well as working with children from primary schools around London."  This book also has poems by some of the primary school children alongside Nichols' poems on a painting or a sculpture.  It is a beautiful experience to see how a child and a grown-up person perceive the same painting.  I wanted to choose one such painting that has poems by Nichols and a child and translate both poems, but I was not confident enough to translate a child's poem.  As Picasso said, "It took me four years to paint like Raphael, but a lifetime to paint like a child."


ಇಂಗ್ಲಿಷ್ ಮೂಲ:     Women and Bird in the Moonlight

ಕವಿ:                     ಗ್ರೇಸ್ ನಿಕೊಲ್ಸ್ Grace Nichols, 

                           Guyana (The Caribbean) & England

ಕನ್ನಡಕ್ಕೆ:               ಎಸ್ ಜಯಶ್ರೀನಿವಾಸ ರಾವ್


ಬೆಳದಿಂಗಳಲ್ಲಿ ನಾರಿಯರು ಮತ್ತು ಹಕ್ಕಿ

ನಿನ್ನ "ಬೆಳದಿಂಗಳಲ್ಲಿ ನಾರಿಯರು ಮತ್ತು ಹಕ್ಕಿ" 

ನನಗೆ ಇಷ್ಟ,

ಆದರೆ, ಯಾಕೇಂತ ಕೇಳಬೇಡ, ಮಿರೋ,

ನನಗೆ ಗೊತ್ತಿಲ್ಲ, ಅಷ್ಟೇ.


ಅದು ಆ ನಕ್ಷತ್ರ ಇರಬಹುದು

ಯಾ ನೀಲಿ ಬಾಲದ ಹಕ್ಕಿ ಇರಬಹುದು.

ಆ ಮುಖಗಳ ಬಾಗು

ಯಾ ಹವೆಯ ಜಾದೂ.


ಅದು ಆ ಬಣ್ಣಗಳಿರಬಹುದು,

ಆ ಚುಕ್ಕೆಗಳು, ಆಕಾರಗಳು -- 

ಕೂಡಿ ಬಂದಿವೆ ಒಂದು ಕವನದಂತೆ

ಬೆಳಗುವ ರಾತ್ರಿಯ ಮುಖದ ಮೇಲೆ.


ನಿನ್ನ "ಬೆಳದಿಂಗಳಲ್ಲಿ ನಾರಿಯರು ಮತ್ತು ಹಕ್ಕಿ" 

ನನಗೆ ಇಷ್ಟ,

ಆದರೆ, ಯಾಕೇಂತ ಕೇಳಬೇಡ, ಮಿರೋ,

ನನಗೆ ಗೊತ್ತಿಲ್ಲ, ಅಷ್ಟೇ. 

*****




Wednesday, November 18, 2020

ಬಲ BALA - DEREK WALCOTT'S "FORCE"

ಇಂಗ್ಲಿಷ್ ಮೂಲ:     Force

ಕವಿ:                     ಡೆರಿಕ್ ವಾಲ್ಕಾಟ್ Derek Walcott, St. Lucia (The Caribbean)

ಕನ್ನಡಕ್ಕೆ:               ಎಸ್ ಜಯಶ್ರೀನಿವಾಸ ರಾವ್

ಬಲ

ಬದುಕು ಹುಲ್ಲಿನ ಗರಿಗಳನ್ನು ನೆಲದೊಳಕ್ಕೆ ಬಡಿಯುತ್ತಲೇ ಇರುತ್ತೆ.


ಈ ಬಡಿತ ನಾ ಮೆಚ್ಚುತ್ತೇನೆ;

ಪ್ರೇಮ ಕಠಿಣ. ನಾ ಮೆಚ್ಚುತೇನೆ 


ಹೆದ್ದೆರೆ ಮತ್ತು ಬಂಡೆಯ ನಡುವಣ ಭೀಕರ ಅಲಾಬಲಿ.

ಅವರೊಳಗೆ ಒಂದೊಪ್ಪಂದವಿದೆ.


ನಾಗಲೋಟದಲ್ಲಿರುವ ಸಿಂಹ ಮತ್ತು ಬೆರಗಿನಿಂತ ಹರಿಣಿಯ

ನಡುವಣ ಕರಾರನ್ನೂ ಗ್ರಹಿಸಿಕೊಳ್ಳಬಲ್ಲೆ,

ಅವಳ ಕಣ್ಗಳ ಭೀತಿಯಲ್ಲೆಲ್ಲೋ ಸಮ್ಮತವಿದೆ.


ಯಾವುದು ನನಗೆ ಎಂದೂ ಅರ್ಥವಾಗದೆಂದರೆ 

ಇದನ್ನು ಬರೆಯುತ್ತಿರುವ ಈ ಪ್ರಾಣಿ

ತಾನೆ ಬದುಕಿನ ಕೇಂದ್ರವೆಂದು ಸಾಧಿಸುವುದು.

*****



ಮೃತ್ಯುವಿಗೆ: ರೆಕ್ವಿಯೆಮ್ ೮ - ANNA AKHMATOVA's 'TO DEATH - REQUIEM 8'

ಮೂಲ:  TO DEATH:  REQUIEM Poem  8 ಕವಿ: ಅನಾ ಅಖ್ಮತೊವಾ, ರಶಿಯಾ  ANNA AKHMATOVA, RUSSIA Translated from the Russian by  Lenore Mayhew and William ...